ಖಾನಾಪುರ ತಾಲೂಕಿನ ಝಂಜವಾಡದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಸಾಯಿ ಹಾಸ್ಪಿಟಲ್ ಕಣ್ಣಿನ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತ ಕಣ್ಣು ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಶಿಬಿರದ ಲಾಭವನ್ನು ಗ್ರಾಮದ ನೂರಾರು ಸಾರ್ವಜನಿಕರು ಪಡೆದುಕೊಂಡರು.”

ಖಾನಾಪುರ:ತಾಲೂಕಿನ ಝಂಜವಾಡ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹಾಗೂ ಸಾಯಿ ಹಾಸ್ಪಿಟಲ್ ಕಣ್ಣಿನ ಸ್ಪೆಷಲಿಸ್ಟ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತರಾದ ಅಪ್ಪಾಜಿ ಪಾಟೀಲ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಝಂಜವಾಡ ಗ್ರಾಮದ ಪ್ರಮುಖ ಗಣ್ಯರು ಹಾಗೂ ಯೋಜನೆಯ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಲಯ ಮೇಲ್ವಿಚಾರಕರಾದ ಸುರೇಂದ್ರ ಅಜಗಾವಕರ ಅವರು, “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗ್ರಾಮೀಣ ಭಾಗದ ಜನರ ಆರೋಗ್ಯಕ್ಕಾಗಿ ಹತ್ತು ಹಲವು ಸಾಮಾಜಿಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಣ್ಣಿನ ಶಿಬಿರವೂ ಅದರಲ್ಲೊಂದಾಗಿದೆ” ಎಂದು ಮಾಹಿತಿ ನೀಡಿದರು. ತದನಂತರ ಸಾಯಿ ಹಾಸ್ಪಿಟಲ್‌ನ ವೈದ್ಯರಾದ ಡಾ. ಅಲಿ ಅವರು ಆಗಮಿಸಿದ್ದ ಸಾರ್ವಜನಿಕರಿಗೆ ಕಣ್ಣಿನ ಉಚಿತ ತಪಾಸಣೆ ನಡೆಸಿ, ಬಿಪಿ ಹಾಗೂ ಶುಗರ್ ತಪಾಸಣೆ ಜೊತೆಗೆ ಆರೋಗ್ಯ ರಕ್ಷಣೆಯ ಕುರಿತು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಶಿಬಿರದಲ್ಲಿ ಝಂಜವಾಡ ಗ್ರಾಮಸ್ಥರು ಬಹುಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.
