Uncategorized

ಧಾರವಾಡದ ನವಲಗುಂದ ರೈತರ ಹುತಾತ್ಮ ದಿನಾಚರಣೆ 46ವರ್ಷ…. ನವಲಗುಂದದಲ್ಲಿ 46ನೇ ವರ್ಷದ ರೈತ ಹುತಾತ್ಮ ದಿನಾಚರಣೆ, ಕೊನರೆಡ್ಡಿ ಹಾಗೂ ಸಿಪಿ ಯೋಗೇಶ್ವರ ಭಾಗಿ

Share

ಧಾರವಾಡದ ನವಲಗುಂದ ಹಾಗೂ ಗದಗದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಇಂದು ನವಲಗುಂದ ರೈತ ಹುತಾತ್ಮ ದಿನಾಚರಣೆ ಮಾಡಲಾಯಿತು. ರೈತ ಬಂಡಾಯ ಬಸಪ್ಪ ಶಿವಪ್ಪ ಲಕ್ಕುಂಡಿ ಅವರ ವೀರಗಲ್ಲಿನ ಸ್ಮಾರಕಕ್ಕೆ ರಾಜಕೀಯ ನಾಯಕರು ಸೇರಿ ರೈತರ ನಾಯಕರು ಗೌರವ ಸಲ್ಲಿಸಿ ರೈತರ ಪರ ಘೋಷಣೆ ಕೂಗಿದರು.

ಹೌದು ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಗದಗ ಜಿಲ್ಲೆಯ ನರಗುಂದ ರೈತ ಬಂಡಾಯಕ್ಕೆ 46 ನೇ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಇಂದು ನವಗುಂದದ ರೈತ ಭವನ ಪಕ್ಕದಲ್ಲಿರುವ ರೈತ ಬಂಡಾಯ ಬಸಪ್ಪ ಶಿವಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಗೌರವ ಸಲ್ಲಿಸಲಾಯಿತು. ಇನ್ನೂ ನವಲಗುಂದ ಶಾಸಕ ಎನ್ ಹೆಚ್ ಕೊನರೆಡ್ಡಿ ನೇತೃತ್ವದಲ್ಲಿ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮ ನಡೆಸಲಾಗಿದ್ದು, ಶಾಸಕ ಸಿಪಿ ಯೋಗೇಶ್ವರ ಹಾಗೂ ಎನ್ ಹೆಚ್ ಕೊನರೆಡ್ಡಿ ಭಾಗಿಯಾಗಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಇದೇ ವೇಳೆ ಮಾತನಾಡಿದ ಶಾಸಕ ಸಿಪಿ ಯೋಗೇಶ್ವರವರು, ಎನ್ ಕೊನರೆಡ್ಡಿಯವರಿಗೆ ಕೃಷಿ ಇಲಾಖೆಯ ಜವಾಬ್ದಾರಿ ನೀಡಬೇಕು ಎಂದು ಬ್ಯಾಟಿಂಗ್ ಮಾಡಿದರು, ಜತೆಗೆ ಶಾಸಕ ಕೊನರೆಡ್ಡಿ ಮಾತನಾಡಿ ನಾನು ಪದೇ ಪದೇ ಸಚಿವ ಸ್ಥಾನ ಕೇಳುವುದಿಲ್ಲ. ಈಗಾಗಲೇ ರಾಜ್ಯ ಸೇರಿ ಕೇಂದ್ರ ನಮ್ಮ ಪಕ್ಷದ ನಾಯಕರಿಗೆ ನಮ್ಮ ಸಚಿವ ಸ್ಥಾನ ನೀಡುವ ಕುರಿತು ಮನವಿ ಮಾಡಿದ್ದೇನೆ. ಕೃಷಿ ಇಲಾಖೆ ಕೊಟ್ಟರೆ ಒಳ್ಳೆಯ ಕೆಲಸ ಪಕ್ಷದ ಹೆಸರು ಉಳಿಸುವಂತೆ ಮಾಡುತ್ತೇನೆ ಎಂದು ಕೊನರೆಡ್ಡಿಯವರು ಪುನರುಚ್ಚಿಸಿದ್ದಾರೆ.

 

Tags:

error: Content is protected !!