Khanapur

ಖಾನಾಪುರ: ಚಿರತೆ ದಾಳಿಗೆ ಎತ್ತು ಬಲಿ; ರೈತರಲ್ಲಿ ಆತಂಕ

Share

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ವಲಯದಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ರೈತರೊಬ್ಬರ ಸಾಕು ಎತ್ತು ಬಲಿಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.
ಲೋಂಡಾ ವಲಯ ವ್ಯಾಪ್ತಿಯ ಘೋಶೆ ಕೆ.ಹೆಚ್ ಗ್ರಾಮದ ಸರ್ವೆ ನಂಬರ್ 35ರಲ್ಲಿ ಚಿರತೆಯೊಂದು ಭೀಕರವಾಗಿ ದಾಳಿ ನಡೆಸಿ ಎತ್ತನ್ನು ಕೊಂದಿರುವ ಘಟನೆ ಸಂಭವಿಸಿದೆ. ಮೃತ ಜಾನುವಾರು ಜಟಗೇ ಗ್ರಾಮದ ರೈತ ರಾಜಾರಾಂ ನಾರಾಯಣ ಪಾಟೀಲ್ ಅವರಿಗೆ ಸೇರಿದ್ದಾಗಿದೆ. ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಇದು ಚಿರತೆ ಅಥವಾ ಹುಲಿಯ ದಾಳಿಯೇ ಇರಬಹುದು ಎಂದು ಅಂದಾಜಿಸಲಾಗಿದೆ. ಸರ್ಕಾರದ ನಿಯಮಾವಳಿಗಳ ಅನ್ವಯ ಸಂತ್ರಸ್ತ ರೈತನಿಗೆ ಶೀಘ್ರದಲ್ಲೇ ಪರಿಹಾರ ಧನ ಮಂಜೂರು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಖಾನಾಪುರ ಎಸಿಎಫ್ ಬಸವರಾಜ ವಾಳದ ಅವರು ಮಾಹಿತಿ ನೀಡಿದ್ದಾರೆ.

Tags:

error: Content is protected !!