ಪ್ರತ್ಯೇಕ್ ಮಹಾನಗರ ಪಾಲಿಕೆಗೆ ಆಗ್ರಹಿಸಿ ಧಾರವಾಡದ ಪಾಲಿಕೆ ಕಚೇರಿ ಮುಂಭಾಗದಲ್ಲಿ ಹಿರಿಯ ನ್ಯಾಯವಾದಿ ಬಿ ಡಿ ಹಿರೇಮಠರು ಉಪವಾಸ ಧರಣಿ ಸತ್ಯಾಗ್ರಹ ಕೈಗೊಂಡಿದ್ದು, ಈ ಹೋರಾಟಕ್ಕೆ ಈಗ ಬಿಜೆಪಿ ಯುವ ನಾಯಕರು ಉಪವಾಸ ಧರಣಿ ಸತ್ಯಾಗ್ರಹಕ್ಕೆ ಧುಮುಕುವ ಮೂಲಕ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ.

ಇಂದು ಬಿಜೆಪಿಯ ಯುವ ನಾಯಕರಾದ ಸದಾಶಿವ ಭಜಂತ್ರಿ, ನಾಗರಾಜ ನಾಯ್ಕ, ಶಫಿ ಬಿಜಾಪುರಿ, ನಾಗೇಶ ಮಾಳಗಿ, ದತ್ತಗುರು ವಾಡಕರ ಉಪವಾಸ ಕುಳಿತಿದ್ದಾರೆ. ಈಗಾಗಲೇ ಈ ಹೋರಾಟಕ್ಕೆ ಧಾರವಾಡದ ಪ್ರತಿಯೊಂದು ಸಂಘ ಸಂಸ್ಥೆಗಳು ಕೈಜೋಡಿಸಿದ್ದು, ರಾಜಕೀಯ ಪಕ್ಷಗಳ ನಾಯಕರು ಹೋರಾಟಕ್ಕೆ ಕೈ ಜೋಡಿಸಿ ಪ್ರತ್ಯೇಕ ಪಾಲಿಕೆಗೆ ಆಗ್ರಹಿಸುತ್ತಿದ್ದಾರೆ.

ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಸೇರಿದಂತೆ, ಅನೇಕ ಸಂಘಟನೆಗಳು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದು, ಹಿರಿಯ ಹೋರಾಟಗಾರ ಬಿ ಡಿ ಹಿರೇಮಠ, ಮನೋಜ ಪಾಟೀಲ, ವೆಂಕಟೇಶ ಮಾಚಕ ನೂರು, ಮಹಾದೇವ ಹೊರಟ್ಟಿ, ಶಿವಶಂಕರ ಹಂಪಣ್ಣವರ ಇದರ ನೇತೃತ್ವ ವಹಿಸಿದ್ದಾರೆ. ದಿನದಿಂದ ದಿನಕ್ಕೆ ಹೋರಾಟ ಬೆಂಬಲ ಹೆಚ್ಚಾಗುತ್ತಿದ್ದು, ಹೋರಾಟಗಾರರ ಶಕ್ತಿಗೆ ಮತ್ತಷ್ಟು ಬಲ ಹೆಚ್ಚಾಗಿದೆ.
