Hukkeri

ದೇಶದ ರಕ್ಷಣೆಗೆ ಯೋಧ ಎಷ್ಟು ಮುಖ್ಯವೋ, ಅನ್ನ ನೀಡುವ ರೈತನೂ ಅಷ್ಟೇ ಮುಖ್ಯ ಇಂದಿನ ದಿನಮಾನದಲ್ಲಿ ರಾಜಕಾರಣ ಅಧಿಕಾರಕ್ಕಾಗಿ ನಡಿಯುತ್ತಿದೆ; ಹುಕ್ಕೇರಿಯಲ್ಲಿ ಮಾಜಿ ಸಂಸದ ರಮೇಶ ಕತ್ತಿ

Share

• ಹುಕ್ಕೇರಿಯಲ್ಲಿ ತೀವ್ರಗೊಂಡ ರೈತರ ಹಕ್ಕೊತ್ತಾಯ ಪ್ರತಿಭಟನೆ
• ರೈತರ ಹೋರಾಟಕ್ಕೆ ಮಾಜಿ ಸಂಸದ ಬೆಂಬಲ
• ನಮ್ಮ ನೀರು ಕೇಳುವುದು ನಮ್ಮ ಹಕ್ಕು
• ರೈತ ಸುರಕ್ಷಿತವಾದರೆ ಮಾತ್ರ ದೇಶ ಸುರಕ್ಷಿತ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆಯುತ್ತಿರುವ ರೈತರ ಬೃಹತ್ ಹೋರಾಟದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಭಾಗವಹಿಸಿ, ರೈತರ ಬೇಡಿಕೆಗಳಿಗೆ ಧ್ವನಿಯಾಗಿದ್ದಾರೆ. ನಮ್ಮ ನೀರನ್ನು ಕೇಳುವುದು ನಮ್ಮ ಹಕ್ಕು ಎಂದು ಗರ್ಜಿಸಿರುವ ಅವರು, ರೈತರ ಯೋಜನೆಗಳಿಗೆ ಸರ್ಕಾರಗಳು ಮೊದಲ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.

ಹುಕ್ಕೇರಿ ಪಟ್ಟಣದಲ್ಲಿ ನಡೆಯುತ್ತಿರುವ ರೈತರ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯನ್ನು ಸ್ಮರಿಸಿದರು. “ದೇಶ ಸುರಕ್ಷಿತವಾಗಿರಬೇಕಾದರೆ ಗಡಿ ಕಾಯುವ ಯೋಧ ಸುರಕ್ಷಿತವಾಗಿರಬೇಕು. ಆದರೆ, ಆ ಯೋಧ ಮತ್ತು ದೇಶದ ಜನರಿಗೆ ಅನ್ನ ಸಿಗಬೇಕಾದರೆ ಮೊದಲು ರೈತ ಸುರಕ್ಷಿತವಾಗಿರಬೇಕು,” ಎಂದು ಅವರು ಪ್ರತಿಪಾದಿಸಿದರು. ಪ್ರಸ್ತುತ ರಾಜಕಾರಣ ಕೇವಲ ಅಧಿಕಾರಕ್ಕಾಗಿ ನಡೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಆ ಸರ್ಕಾರ ಈ ಸರ್ಕಾರ ಎನ್ನುವುದಕ್ಕಿಂತ ಎಲ್ಲಾ ಸರ್ಕಾರಗಳೂ ರೈತರ ಪರವಾಗಿ ನಿಲ್ಲಬೇಕು ಮತ್ತು ನಮ್ಮ ನೀರನ್ನು ಕೇಳುವುದು ನಮ್ಮ ಸಾಂವಿಧಾನಿಕ ಹಕ್ಕಾಗಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತಾಲೂಕಿನ ನೀರಾವರಿ ಇತಿಹಾಸವನ್ನು ನೆನಪಿಸಿದ ರಮೇಶ ಕತ್ತಿ, ಮಲ್ಲನಗೌಡ ಪಾಟೀಲರ ಅವಧಿಯಲ್ಲಿ ಕುರಣಿ ಕೋಚೇರಿ ಏತ ನೀರಾವರಿ, ಮಹಾಜನ ಶೆಟ್ಟಿ ಅವಧಿಯಲ್ಲಿ ಉಸ್ತಪುರ ಏತ ನೀರಾವರಿ ಹಾಗೂ ಉಮೇಶ್ ಕತ್ತಿ ಮತ್ತು ಶಶಿಕಾಂತ ನಾಯಿಕ ಅವರ ಅವಧಿಯಲ್ಲಿ ಕೋಟಬಾಗಿ ಏತ ನೀರಾವರಿ ಯೋಜನೆಗಳಾಗಿವೆ. ಇದರೊಂದಿಗೆ ಅಡವಿ ಸಿದ್ಧೇಶ್ವರ ಮತ್ತು ಶಂಕಲಿಂಗ ಏತ ನೀರಾವರಿ ಯೋಜನೆಗಳೂ ಸಾಕಾರಗೊಂಡಿವೆ ಎಂದರು. ಸದ್ಯ ಹುಕ್ಕೇರಿ ತಾಲೂಕಿನ ಎಲ್ಲಾ ಹಳ್ಳಿಗಳಿಗೆ 280 ಕೋಟಿ ರೂಪಾಯಿ ವೆಚ್ಚದಲ್ಲಿ 24*7 ಕುಡಿಯುವ ನೀರಿನ ಸರಬರಾಜು ಕಾಮಗಾರಿ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದ ಅವರು, ರಾಜ್ಯ ಸರ್ಕಾರವು ರೈತರ ಯೋಜನೆಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಿಎಂ ಮತ್ತು ಡಿಸಿಎಂ ಅವರಿಗೆ ವೇದಿಕೆಯ ಮುಖಾಂತರ ಮನವಿ ಮಾಡಿದರು.

Tags:

error: Content is protected !!