Bagalkot

ಹುನಗುಂದ ಪೊಲೀಸರ ಹೈವೋಲ್ಟೇಜ್ ಕಾರ್ಯಾಚರಣೆ: ಕಳ್ಳತನ, ಸುಲಿಗೆ ಪ್ರಕರಣ ಭೇದಿಸಿ 47 ಲಕ್ಷ ಮೌಲ್ಯದ ಸ್ವತ್ತು ವಶ!

Share

ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಸರಣಿ ಕಳ್ಳತನ ಮತ್ತು ಸುಲಿಗೆ ಪ್ರಕರಣಗಳಿಗೆ ಬ್ರೇಕ್ ಹಾಕಿರುವ ಪೊಲೀಸರು, ಖದೀಮರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಒಂದೇ ಪ್ರಕರಣದ ಬೆನ್ನತ್ತಿದ ಖಾಕಿ ಪಡೆ, ಬರೋಬ್ಬರಿ 46.99 ಲಕ್ಷ ರೂಪಾಯಿ ಮೌಲ್ಯದ ಮಾಲು ಜಪ್ತಿ ಮಾಡಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ, ಅಮೀನಗಡ ಹಾಗೂ ಇಲಕಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಸರಣಿ ಕಳ್ಳತನ ಮತ್ತು ಸುಲಿಗೆ ಪ್ರಕರಣಗಳನ್ನು ಭೇದಿಸುವಲ್ಲಿ ಹುನಗುಂದ ಪೊಲೀಸರು ಭರ್ಜರಿ ಯಶಸ್ಸು ಗಳಿಸಿದ್ದಾರೆ.

ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರಿಂದ ಬರೋಬ್ಬರಿ 46.99 ಲಕ್ಷ ರೂಪಾಯಿ ಮೌಲ್ಯದ 54 ಬೈಕ್‌ಗಳು, ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ಜಪ್ತಿ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸಾರ್ವಜನಿಕರ ನಿದ್ದೆಗೆಡಿಸಿದ್ದ ಕಳ್ಳರನ್ನು ಪತ್ತೆಹಚ್ಚಿ ಕೋಟ್ಯಂತರ ರೂಪಾಯಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆಗೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Tags:

error: Content is protected !!