Bagalkot

ಬಾಗಲಕೋಟೆ ಬಿರುಗಾಳಿ ಮಳೆ ಅವಾಂತರ: ಬೆಳೆ, ಜಾನುವಾರು ಕಳೆದುಕೊಂಡು ಕಣ್ಣೀರಿಡುತ್ತಿರುವ ರೈತ!

Share

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ವರುಣನ ಆರ್ಭಟಕ್ಕೆ ರೈತಾಪಿ ವರ್ಗ ಸಂಪೂರ್ಣ ಕಂಗಾಲಾಗಿದೆ. ಬಿರುಗಾಳಿ ಸಹಿತ ಸುರಿದ ಭೀಕರ ಮಳೆಗೆ ಸಿಡಿಲು ಬಡಿದು ಜಾನುವಾರುಗಳು ಸಾವನ್ನಪ್ಪಿದ್ದು, ನೂರಾರು ಎಕರೆ ತೋಟದ ಬೆಳೆಗಳು ನೆಲಕಚ್ಚಿವೆ.


ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಸುರಿದ ಭಾರೀ ಮಳೆ ಮತ್ತು ಸಿಡಿಲು ತೀವ್ರ ಅವಾಂತರ ಸೃಷ್ಟಿಸಿದೆ. ರಂಜಣಗಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎಮ್ಮೆಗಳು ಹಾಗೂ ಒಂದು ಮೇಕೆ ಮೃತಪಟ್ಟಿದ್ದು, ವಾಸದ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದೆ. ಮಾಚಕನೂರ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ 15 ಎಕರೆಗೂ ಅಧಿಕ ಬಾಳೆ ತೋಟ ನೆಲಕಚ್ಚಿದ್ದರೆ, ಲೋಕಾಪುರ ಭಾಗದಲ್ಲಿ ವ್ಯಾಪಕ ದಾಳಿಂಬೆ ಬೆಳೆ ಹಾನಿಯಾಗಿದೆ.

ಇತ್ತ ಮುಧೋಳ ನಗರ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಮನೆಗಳ ಮೇಲ್ಚಾವಣಿ ಶೀಟುಗಳು ಹಾರಿಹೋಗಿದ್ದು, ಸಾರ್ವಜನಿಕರು ಆಶ್ರಯ ಕಳೆದುಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟದಿಂದ ತತ್ತರಿಸಿರುವ ಅನ್ನದಾತರ ನೆರವಿಗೆ ಧಾವಿಸಿರುವ ಕಂದಾಯ ಅಧಿಕಾರಿಗಳು, ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿದ್ದಾರೆ.

Tags:

error: Content is protected !!