ಚಾಲಕ ನಿದ್ದೆ ಮಂಪರಿನಿಂದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ನುಗ್ಗಿದ ಈಗ ಬೆಳಗಾವಿ ಕಿತ್ತೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿಂದು ಬೆಳ್ಳಂಬೆಳಗ್ಗೆ ನಡೆದಿದ್ದು, ಅನಾಹುತವೊಂದು ತಪ್ಪಿದೆ.

ಬೆಳಗಾವಿಯ ಸಕ್ಕರೆ ಕಾರ್ಖಾನೆಯಿಂದ ಲೋಡ ತೆಗೆದುಕೊಂಡು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಧಾರವಾಡ ಕಡೆಗೆ ಬರುತ್ತಿದ್ದ ವೇಳೆ, ಕಿತ್ತೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭಂವಿಸಿದೆ. ಅದೇ ಮಾರ್ಗದಲ್ಲಿ ಬರುತ್ತಿದ್ದ ಧಾರವಾಡ ಮೂಲದ ಜಿಲಾನಿ ಖಾಜಿ ಹಾಗೂ ಯುವಕರ ತಂಡ ಕೂಡಲೇ ಪಲ್ಟಿಯಾಗಿ ಲಾರಿಯಲ್ಲಿ ಸಿಲುಕಿದ ಚಾಲಕನನ್ನು ರಕ್ಷಣೆ ಹೊರತೆಗೆಯುವ ಮೂಲಕ ಸಮಾಜಿಕ ಜವಾಬ್ದಾರಿ ಮೇರೆದಿದ್ದಾರೆ. ಘಟನೆಯಲ್ಲಿ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲಾನಿ ಖಾಜಿ ಆ್ಯಂಡ್ ಟೀಂ ಚಾಲಕನಿಗೆ ನೀರು ನೀಡಿ ಉಪಚರಿಸಿ ಆರೋಗ್ಯ ವಿಚಾರಿಸಿದ ಬಳಿಕ, ಹೈವೇ ಪೆಟ್ರೋಲಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸದ್ಯ ಗಾಯಾಳ ಸ್ಥಿತಿ ವಿಚಾರಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಬೆಳಗಾವಿ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

