hukkeri

ಹುಬ್ಬಳ್ಳಿ: ಮೊಬೈಲ್ ಕೊಡಿಸದಿದ್ದಕ್ಕೆ ಮೇಸ್ತ್ರಿ ಭೀಕರ ಕೊಲೆ

Share

ಮೊಬೈಲ್ ಕೊಡಿಸದೇ ಇದ್ದಿದಕ್ಕೆ ಕಟ್ಟಡ ನಿರ್ಮಾಣ ಮೆಸ್ತ್ರಿಯನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಗಾರೆ ಕೆಲಸಗಾರ ಕೊಲೆ ಮಾಡಿದ ಪ್ರಕರಣ,ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಹೊರವಲಯದಲ್ಲಿ ನಡೆದಿದೆ.ದಾದಾಪೀರ್ ಕೋಲ್ಕಾರ್ (38) ಕೊಲೆಯಾದ ವ್ಯಕ್ತಿ.ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ನಿವಾಸಿ. ಅಜೀಂ ಜಮಖಾನೆ ಕೊಲೆ ಮಾಡಿರುವ ಆರೋಪಿ..

ಕಟ್ಟಡ ನಿರ್ಮಾಣ ಮೇಸ್ತ್ರಿ ಆಗಿದ್ದ ದಾದಾಪೀರ್ ಬಳಿ ಅಜೀಂ ಗಾರೆ ಕೆಲಸ ಮಾಡುತ್ತಿದ್ದ. ತಾನು ಮಾಡಿದ ಕೆಲಸಕ್ಕೆ ಕೂಲಿ ಪರವಾಗಿ ಹೊಸ ಮೊಬೈಲ್ ಕೊಡಿಸುವಂತೆ ಹೇಳಿದ್ದ ಅಜೀಂ. ಅದರಂತೆ ಹಲವು ದಿನ ಕೆಲಸ ಮಾಡಿ, ಮೊಬೈಲ್ ಕೇಳಿದ, ಇದಕ್ಕೆ ಉಲ್ಟಾ ಹೊಡೆದ ಮೇಸ್ತ್ರಿ ದಾದಾಪೀರ್, ನೀನು ಈ ಹಿಂದೆ ನೀಡಿದ್ದ 25 ಸಾವಿರ ಹಣ ಮರಳಿ ನೀಡಿಲ್ಲಾ,ಕೆಲಸಕ್ಕೂ ಸರಿಯಾಗಿ ಬರ್ತಿಲ್ಲಾ ನೆಪ ಹೇಳಿ ಮೊಬೈಲ್ ಕೊಡಿಸುವುದಿಲ್ಲ ಅಂತ ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದು ಅಜೀಂ ದಾದಾಪೀರ್ ಮನೆಗೆ ತೆರಳಿ, ಕಬ್ಬಿಣದ ರಾಡ್ ನಿಂದ ಮನಬಂದಂತೆ ಹಲ್ಲೆ ಮಾಡಿ, ಕೊಲೆ ಮಾಡಿ ಪರಾರಿಯಾಗಿದ್ದಾನೆ‌.
ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!