Vijaypura

ಬಸವ ಜ್ಯೋತಿಯೊಂದಿಗೆ ನಡಿಗೆ ಮತ್ತು ಓಟ 50 ಕಿ.ಮೀ. ಪಾದಯಾತ್ರೆ

Share

1. ಬಸವನ ಬಾಗೇವಾಡಿಯಿಂದ ವಿಜಯಪುರಕ್ಕೆ ಪಾದಯಾತ್ರೆ
2. 50 ಕಿ.ಮೀ. ಬಸವ ಜ್ಯೋತಿಯೊಂದಿಗೆ ನಡಿಗೆ ಮತ್ತು ಓಟ
3. ಶಿವಗಿರಿಯಲ್ಲಿ ಪಾದಯಾತ್ರಿಗಳಿಗೆ ಅದ್ಧೂರಿ ಸ್ವಾಗತ
4. ಬಸವ ತತ್ವ ಪ್ರಸಾರಕ್ಕಾಗಿ ಭಕ್ತಿಭಾವದ ಪಯಣ

ವಿಶ್ವಗುರು ಬಸವಣ್ಣನವರ ಜಯಂತಿ ಹಿನ್ನೆಲೆಯಲ್ಲಿ ಬಸವ ಜ್ಯೋತಿಯೊಂದಿಗೆ ನಡಿಗೆ ಮತ್ತು ಓಟವು ಬಸವಣ್ಣನವರ ಜನ್ನಭೂಮಿ ಬಸವನ ಬಾಗೇವಾಡಿಯಿಂದ ಪ್ರಾರಂಭವಾಗಿ ಮುಂದೆ ಮಸಬಿನಾಳ , ಉಕ್ಕಲಿ, ಹಾಗೂ ಉಕುಮನಾಳ , ನಂತರ ರಾತ್ರಿ 12: ಗಂಟೆಯಿಂದ ಬೆಳ್ಳಗೆ 5:00 ಗಂಟೆಯ ವರೆಗೆ ಶಿವಗಿರಿ ತಲುಪಿತು.
ಪಾದಯಾತ್ರೆಗಳಿಗೆ ಶಿವಗಿರಿಯಲ್ಲಿ ಶ್ರೀ ಟಿ ಕೆ ಪಾಟೀಲ್ (ಬೆನಕಟ್ಟಿ) ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷರಾದ ಬಸಂತಕುಮಾರ ಪಾಟೀಲ್ ಹಾಗೂ ಆರತಿ ಪಾಟೀಲ ಅವರಿಂದ ಹಣ್ಣು, ನೀರು ಹಾಗೂ ಫಿಸಿಯೋಥೆರಪಿಗಾಗಿ ಗಾದಿ ವ್ಯವಸ್ಥೆ ಹಾಗೂ ಪೇನ್ ಕಿಲ್ಲರ್ ಸ್ಪ್ರೇ ವ್ಯವಸ್ಥೆ ಸಮರ್ಪಕವಾಗಿ ಮಾಡಲಾಗಿತ್ತು.
ಭಾಗವಹಿಸುವವರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮುಂಜಾನೆ 5:30 ಗಂಟೆಗೆ ಶಿವಗಿರಿಯಿಂದ ಹೊರಟು ಬಸವೇಶ್ವರ ವೃತ್ತ ತಲುಪಿ 6:30 ಗಂಟೆಗೆ ಪೂಜೆ ಕಾರ್ಯಕ್ರಮಗಳು ಪ್ರಾರಂಭವಾಯಿತು‌ ಬಸವಣ್ಣನ ಜನ್ಮಭೂಮಿ ಬಸವನ ಬಾಗೇವಾಡಿದಿಂದ ವಿಜಯಪುರ ಬಸವೇಶ್ವರ ವೃತ್ತದವರೆಗೆ ನಡಿಗೆ ಮತ್ತು ಓಟ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಾಗೂ ಸಮಾಜ ಜಾಗೃತಿ ಉದ್ದೇಶದಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಬಸವಣ್ಣನ ತತ್ವಗಳು, ಆದರ್ಶಗಳು ಹಾಗೂ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವುದಾಗಿದೆ.

Tags:

error: Content is protected !!