ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿರುವ ಜ್ಯೋತಿಬಾ ದೇವಸ್ಥಾನದ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮದಬಾವಿ ಗ್ರಾಮಕ್ಕೆ ತೆರಳಿದ್ದ ಶ್ರೀ ಜ್ಯೋತಿಬಾ ಪಲ್ಲಕ್ಕಿಯು ವಿಜಯಪುರ ನಗರಕ್ಕೆ ಮರಳಿತು. ಈ ಹಿನ್ನೆಲೆಯಲ್ಲಿ ಮಂಗಳವಾರದಂದು ವಿಜಯಪುರ ನಗರದಲ್ಲಿ ಭವ್ಯ ಮತ್ತು ವೈಭವಮಯ ಮೆರವಣಿಗೆ ಆಯೋಜಿಸಲಾಗಿತ್ತು. ಪಲ್ಲಕ್ಕಿ ಮೆರವಣಿಗೆಯು ನಗರದ ಕೊರಿಶೆಟ್ಟಿ ತೋಟ ಹಾಗೂ ಇಬ್ರಾಹಿಂ ರೋಜಾದಿಂದ ಮೆರವಣಿಗೆ ದೇವಸ್ಥಾನದವರೆಗೆ ಸಾಗಿತು. ಸಾಂಪ್ರದಾಯಿಕ ವಾದ್ಯಗೋಷ್ಠಿ, ಭಕ್ತರ ಜಯಘೋಷ ಮತ್ತು ಭಕ್ತಿಭಾವದ ಮಧ್ಯೆ ಮೆರವಣಿಗೆ ನಗರಕ್ಕೆ ಹಬ್ಬದ ವಾತಾವರಣ ನೀಡಿತು. ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತಿಯ ಭಾವರಂಗದಲ್ಲಿ ಜ್ಯೋತಿಬಾ ನಾಮಸ್ಮರಣೆ ಮೊಳಗಲು ವೇದಿಕೆ ಸಿದ್ಧವಾಗಿದೆ. ಜ್ಯೋತಿಬಾ ಭಕ್ತರಿಗಾಗಿ ಇದು ಕೇವಲ ಮೆರವಣಿಗೆಯಲ್ಲ, ಭಕ್ತಿ, ಪರಂಪರೆ ಮತ್ತು ಸಮುದಾಯ ಏಕತೆಯ ಮಹೋತ್ಸವವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇನ್ನೂ ದಿನಾಂಕ 25 ಹಾಗೂ 26 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದಿನಾಂಕ 25 ರಂದು ಗಣ ಹೋಮ ಆಯೋಜಿಸಲಾಗಿದೆ. ಈ ಹೋಮದಲ್ಲಿ ದಂಪತಿಗಳು ಭಾಗಿಯಾಗಲು ಅವಕಾಶವಿದೆ. ಅಂದೇ ಸಾಯಂಕಾಲ ಸಾಯಂಕಾಲ 6 ಗಂಟೆಗೆ ದೀಪೋತ್ಸವ ನಡೆಯಲಿದೆ. ದಿನಾಂಕ 26 ರಂದು ಮಧ್ಯಾಹ್ನ12.30 ಕ್ಕೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಕಾರಣ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಲಯ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಿವಾಜಿ ಗಾಯಕವಾಡ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು ವಿನಂತಿಸಿದ್ದಾರೆ.

