ಮುಳುಗಡೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು,ನಗರದಲ್ಲಿ ಮೇಲಿಂದ ಮೇಲೆ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚುತ್ತಿದೆ.ಬೀದಿನಾಯಿಗಳ ಉಪುಟಳಕ್ಕೆ ಬ್ರೇಕ್ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ರೂ ನಗರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿದ್ದಾರೆ.ಇದೀಗ ಒಂದೇ ದಿನ ಪ್ರತ್ಯೇಕ ಎರಡು ಕಡೆಗಳಲ್ಲಿ ಬೀದಿ ನಾಯಿ ದಾಳಿ ಪ್ರಕರಣ ನಡೆದಿದೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ….

ಒಂದೆಡೆ ನಗರದ ರಸ್ತೆಗಳಲ್ಲಿ ಹಿಂದು-ಹಿಂಡಾಗಿ ಬೀಡು ಬಿಟ್ಟಿರೋ ಬೀದಿ ನಾಯಿಗಳು.ಮತ್ತೊಂದೆಡೆ ಬೀದಿನಾಯಿ ದಾಳಿಗೆ ತುತ್ತಾಗಿ ಆಸ್ಪತ್ರೆಗೆ ಸೇರಿರೋ ಬಾಲಕಿ.ಇನ್ನೊಂದೆಡೆ ಬೀದಿನಾಯಿ ನಿಯಂತ್ರಣದ ಬಗ್ಗೆ ನಗರಸಭೆ ವಹಿಸಿದ ನಿರ್ಲಕ್ಷ್ಯಕ್ಕೆ ಅಸಮಧಾನ ವ್ಯಕ್ತ ಪಡಿಸುತ್ತಿರೋ ಸ್ಥಳೀಯರು.ಇಂತಹ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ನವನಗರದಲ್ಲಿ. ಹೌದು ಬಾಗಲಕೋಟೆ ನವನಗರ ಹಾಗೂ ವಿದ್ಯಾಗಿರಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ.ನವನಗರದ ಸೆಕ್ಟರ್ 2 ಹಾಗೂ 3 ರಲ್ಲಿ ಪ್ರತ್ಯೇಕವಾಗಿ ಎರಡು ಕಡೆಗಳ್ಳಿ ಬೀದಿನಾಯಿ ದಾಳಿ ನಡೆಸಿದ ಪ್ರಕರಣ ನಡೆದಿದ್ದು,ನಾಯಿ ದಾಳಿಗೆ ತುತ್ತಾದ ಅಝಕಾ(೩) ಹಾಗೂ ಆರ್ಶಿಯಾ(೫) ಇಬ್ಬರು ಬಾಲಕಿಯರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಗರದಲ್ಲಿ ಹೆಚ್ಚಿದ ಬೀದಿನಾಯಿಗಳ ಹಾವಳಿಗೆ ಬೇಸತ್ತ ಜನ್ರು ನಗರಸಭೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದ್ರು.
ಇನ್ನು ಬಾಗಲಕೋಟೆ ನವನಗರದಲ್ಲಿ ಈ ಹಿಂದೆಯೂ ಬೀದಿನಾಯಿ ದಾಳಿ ಪ್ರಕರಣಗಳು ನಡೆದಿದ್ದು,ನಾಯಿ ದಾಳಿಗೆ 7 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.ಆದ್ರೆ ನಗರಸಭೆ ಮಾತ್ರ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕುವ ಕಾರ್ಯಕ್ಕೆ ಮುಂದಾಗ್ತಿಲ್ಲ.ನವನಗರದ ಸೆಕ್ಟರ್ ನಂಬರ್ 2 ನಿವಾಸಿ ಅಝಕಾ ಮನೆ ಬಳಿ ಆಟ ಆಡ್ತಿದ್ದ ವೇಳೆ ನಾಯಿ ದಾಳಿ ಮಾಡಿದ್ದು,ಕತ್ತಿನ ಕೆಲಭಾಗದಲ್ಲಿ ಗಾಯವಾಗಿದೆ.ಸೆಕ್ಟರ್ ನಂಬರ್ 3 ರ ನಿವಾಸಿ ಆರ್ಶಿಯಾ ಕೂಡ ತಮ್ಮ ಮನೆ ಅಂಗಳದಲ್ಲಿ ಆಟ ಆಡ್ತಿದ್ದ ವೇಳೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳೊಸಿದೆ.ಬಾಲಕಿಯರಿಬ್ಬರಿಗೂ ಜಿಲ್ಲಾಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಲಾಗಿದ್ದು, ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕದ ನಗರದಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ…
ಒಟ್ಟಿನಲ್ಲಿ ಬಾಗಲಕೋಟೆ,ನವನಗರ,ವಿದ್ಯಾಗಿರಿ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು,ನಗರಸಭೆ ಬೀದಿನಾಯಿಗಳ ಹಾವಳಿಗೆ ಬ್ರೇಕ್ ಹಾಕಿ,ಶಾಲಾರಜೆಯಲ್ಲಿ ಮನಸ್ಸು ಬಿಚ್ಚಿ ಆಡಬೇಕಿದ್ದ ಮಕ್ಕಳಲ್ಲಿನ ಆತಂಕ ದೂರ ಮಾಡಬೇಕಿದೆ….
