ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ವಿರುದ್ಧ ರಾಜಕೀಯ ಷಡ್ಯಂತರ ಮಾಡಿ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ, ಜೀವಾವಧಿ ಶಿಕ್ಷೆ ಗುರಿಪಡಿಸಲಾಗಿದೆ ಎಂದು ಆರೋಪಿಸಿ, ಧಾರವಾಡದಲ್ಲಿ ಕುಲಕರ್ಣಿ ಅಭಿಮಾನಿಗಳು ಬೀದಿಗೆ ಇಳಿದು ಮೌನ ಪ್ರತಿಭಟನೆ ಮೆರವಣಿಗೆ ನಡೆಸಿದರು.

ಹುಬ್ಬಳ್ಳಿ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ನೇತೃತ್ವದಲ್ಲಿ ನಗರ ಕಲಾಭವನದಿಂದ ಸುಭಾಷ್ ರಸ್ತೆಯ ಕೆಸಿಸಿ ಬ್ಯಾಂಕ್ ವೃತದ ವರೆಗೆ ವಿನಯ ಕುಲಕರ್ಣಿಯವರ ಅಭಿಮಾನಿಗಳು ಕೈಗೆ ಕಪ್ಪ ಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ಮೆರವಣಿಗೆ ಕೈಗೊಂಡರು. ನೂರಾರು ಸಂಖ್ಯೆಯಲ್ಲಿ ಕುಲಕರ್ಣಿ ಅಭಿಮಾನಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ವಿನಯ ಪ್ಲೇಕ್ಸ್ಗಳನ್ನು ಹಿಡಿದು ಹೆಜ್ಜೆ ಹಾಕಿದರು. ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಜನ ಸ್ನೇಹಿ ಹಾಗೂ ಅಭಿವೃದ್ಧಿ ಸ್ನೇಹಿ ವಿನಯ ಕುಲಕರ್ಣಿಯವರನ್ನು ರಾಜಕೀಯ ಷಡ್ಯಂತರ ಮಾಡಿ ಸಿಲುಕಿಸಲಾಗಿದೆ. ಈ ರಾಜಕೀಯ ಷಡ್ಯಂತರ ಸರಿಯಲ್ಲ, ಮುಂದಿನ ನ್ಯಾಯಾಲಯದಲ್ಲಿ ಅವರಿಗೆ ನ್ಯಾಯ ಸಿಗುವ ನಿರೀಕ್ಷೆ ಇದೆ. ವಿನಯ ಕುಲಕರ್ಣಿಯವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಹಾಗೂ ಅವರ ಸರಳ ಸಜ್ಜಿನಿಕೆಯ ನಡೆಯಿಂದ ಜನ ಮಧ್ಯೆ ಇರುವ ಸ್ವಾಭಾವ ಹೊಂದಿದ್ದರು. ಅಂತಹವರ ವಿರುದ್ಧ ರಾಜಕೀಯ ಷಡ್ಯಂತರ ಮಾಡುತ್ತಿರುವುದು ಅತ್ಯಂತ ನೋವು ತಂದಿದೆ ಎಂದರು.
