Dharwad

ಧಾರವಾಡ ಕವಿವಿಯಲ್ಲಿ 75ನೇ ಘಟಿಕೋತ್ಸವ…..ಮೂವರಿಗೆ ಗೌರವ ಡಾಕ್ಟರೇಟ್ ಪ್ರಧಾನ.

Share

ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ 75ನೇ ಘಟಿಕೋತ್ಸವವು ಇಂದು ಕವಿವಿಯ ಆವರಣದ ಗಾಂಧಿ ಭವನದಲ್ಲಿ ಜರುಗಿತು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ರ್‍ಯಾಂಕ್ ವಿಜೇತರಿಗೆ ಚಿನ್ನಸ ಪದಕ ಹಾಗೂ ವಿವಿಧ ಪಿಜಿ, ಯುಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಕರ್ನಾಟಕ ವಿಶ್ವ ವಿದ್ಯಾಲಯದ ಗಾಂಧಿ ಭವನದಲ್ಲಿ 75ನೇ ಘಟಿಕೋತ್ಸವ ಜರುಗಿದ್ದು, ಇಸ್ರೋ ನಿಕಟಪೂರ್ವ ಅಧ್ಯಕ್ಷ ಡಾ. ಎ.ಎಸ್. ಕಿರಣಕುಮಾರ್ ಘಟಿಕೋತ್ಸವ ಭಾಷಣ ಮಾಡಿದರು. ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಘಟಿಕೋತ್ಸವದಲ್ಲಿ ಓಡಿಶಾದ ಶಿಕ್ಷಣ ತಜ್ಞ ಪ್ರೊ. ಅಚ್ಯುತ್ ಸಾಮಂತ, ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್ ಸ್ಥಾಪಕ ಜಿತೇಂದ್ರ ಮಜೇಥಿಯಾ ಹಾಗೂ ಬೆಳಗಾವಿ ಮೂಲದ, ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು. ಘಟಿಕೋತ್ಸವದಲ್ಲಿ 252 ಪಿಎಚ್‌ಡಿ, 4587 ಸ್ನಾತಕೋತ್ತರ ಪದವಿ, 20740 ಪದವಿ, 95 ಕಾನೂನು ಪದವಿ, 69 ಡಿಪ್ಲೋಮಾ ಸೇರಿ 25743 ಪದವಿಗಳನ್ನು ಪ್ರಧಾನ ಮಾಡಲಾಯಿತು. ಇದೇವೇಳೆ 113 ವಿದ್ಯಾರ್ಥಿಗಳಿಗೆ 270 ಚಿನ್ನದ ಪದಕಗಳನ್ನು ಪ್ರಧಾನ ಮಾಡಿ ಗೌರವಿಸಲಾಯಿತು.

Tags:

error: Content is protected !!