Vijaypura

ಹಿಜಾಬ್ ತೆಗೆಸಿದ ಬಿಇಓ: ಶಿಕ್ಷಕಿಯರಿಗೂ ಖಡಕ್ ವಾರ್ನಿಂಗ್

Share

ವಿಜಯಪುರ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಸಹಿತ ತರಗತಿಗಳಿಗೆ ಹಾಜರು ವಿಚಾರದ ವಿಷಯ ತಿಳಿದು ಶಾಲೆಗೆ ಭೇಟಿ ನೀಡಿದ ವಿಜಯಪುರ ನಗರ ಬಿಇಓ ಎಂ ಬಿ ಮೊರಟಗಿಯವರು ತರಗತಿಗಳ ಭೇಟಿ ನೀಡಿ ವೀಕ್ಷಣೆ ಮಾಡಿದರು.

ತರಗತಿಗಳ ವೀಕ್ಷಣೆ ಬಳಿಕ ಬಿಇಓ‌ ಮೋರಟಗಿಯವ್ರು ಮಾದ್ಯಮಗಳ ಜೊತೆ ಮಾತನಾಡಿ ತರಗತಿಯಲ್ಲಿ ಹಿಜಾಬ್ ಹಾಕಿಕೊಂಡು ವಿದ್ಯಾರ್ಥಿನಿಯರು ‌ಹಾಜರಾಗಿದ್ದರು. ಸರ್ಕಾರದ ನಿಯಮದ ಪ್ರಕಾರ ಹಿಜಾಬ್ ತೆಗೆಸಲಾಗಿದೆ ಎಂದರು. ತರಗತಿಗಳಿಗೆ ಪ್ರವೇಶಕ್ಕೂ ‌ಮುನ್ನ ಹಿಜಾಬ್ ತೆಗೆದು ಹಾಜರಾಗಲು ವಿದ್ಯಾರ್ಥಿನಿಯರಿ ಯರಿಗೆ ಸೂಚಿಸಲಾಗಿದೆ ಎಂದರು. ಈ‌ ನಿಟ್ಟಿನಲ್ಲಿ ಶಿಕ್ಷಕರಿಗೂ ಸೂಚಿಸಲಾಗಿದೆ, ಹಿಜಾಬ್ ಕೇಸರಿ ಶಾಲು ವಿಚಾರದಲ್ಲಿ ಮಕ್ಕಳ ಶಿಕ್ಷಣಕ್ಕೆ ‌ತೊಂದರೆಯಾಗಬಾರದು ಎಂದರು. ಪೋಷಕರು ಸಹ ಈ ವಿಷಯದಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

 

Tags:

error: Content is protected !!