ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳುವ ಹಕ್ಕು ಆಡಳಿತ ಪಕ್ಷದ ಶಾಸಕರಿಗೆ ಇದೆ. ನೀವು ಇದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಕುರಿತ ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳುವ ಹಕ್ಕು ಆಡಳಿತ ಪಕ್ಷದ ಶಾಸಕರಿಗೆ ಇದೆ. ನೀವು ಇದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ, ನಾವು ಯಾರನ್ನೂ ಟೀಕಿಸಲು ಸಾಧ್ಯವಿಲ್ಲ, ಯಾರಿಗೂ ಅಭಿನಂದನೆಗಳಿಲ್ಲ,
ಬಿಜೆಪಿಯೊಳಗಿನ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬೇಡಿ ಎಂದು ಅವರು ಕಾಂಗ್ರೆಸ್ ಪಕ್ಷದ ನಾಯಕರಿಗೆ ಸಲಹೆ ನೀಡಿದರು.
ವಿವಿಧ ಪಕ್ಷಗಳ ಸದಸ್ಯರು ಕಾಂಗ್ರೆಸ್ ಸೇರುತ್ತಾರಾ ? ನಿಮ್ಮೊಂದಿಗೆ ಎಷ್ಟು ಜನರು ಸಂಪರ್ಕದಲ್ಲಿದ್ದಾರೆ ? ಈ ಪ್ರಶ್ನೆ ಕೇಳಿದರೂ ಉತ್ತರಿಸದೆ ಮುಂದುವರಿದರು ಡಿಕೆಶಿ ,..