ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯತಿ ಯಲ್ಲಿ ಮನೆ ಹಾಗೂ ವಾಣಿಜ್ಯ ತೆರಿಗೆ ವಸೂಲಾತಿ ಸಮರ್ಪಕವಾಗಿಲ್ಲ ಎಂದು ಆಹಾರ ಮತ್ತು ಅರಣ್ಯ ಸಚಿವ ಉಮೇಶ ಕತ್ತಿ ಬೇಸರ ವ್ಯಕ್ತ ಪಡಿಸಿದರು.
ಅವರು ಹುಕ್ಕೇರಿ ನಗರದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಜರುಗಿದ ತ್ರೈಮಾಸಿಕ ಕೆ ಡಿ ಪಿ ಸಭೆಯಲ್ಲಿ ವಿವಿಧ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಂದ ಪ್ರಗತಿ ಪರಶೀಲನೆ ಹಾಗೂ ಕರ ವಸೂಲಾತಿ ಬಗ್ಗೆ ವಿವರಣೆ ಪಡೆದರು.

ಗ್ರಾಮಗಳ ಅಭಿವೃದ್ಧಿಗೆ ಸಾರ್ವಜನಿಕರು ತೆರಿಗೆ ಕಟ್ಟುವದು ಅವಶ್ಯವಾಗಿದೆ, ಕಾರಣ ತಮ್ಮ ಮನೆ, ಅಂಗಡಿ ಕರವನ್ನು ನಿಗದಿತ ಸಮಯದಲ್ಲಿ ಭರಣಾ ಮಾಡಬೇಕು ಮತ್ತು ಗ್ರಾಮ ಪಂಚಾಯತಿ ನೌಕರರು ತೆರಿಗೆ ಮಾಡದ ಮನೆಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಕಡಿತ ಮಾಡಬೇಕು ಎಂದು ಹೇಳಿದರು. ಹಾಗೂ ಪ್ರತಿಶತ ತೆರಿಗೆ ವಸೂಲಿ ಮಾಡಿದ ಸಿಬ್ಬಂದಿಗಳನ್ನು ತಾಲೂಕಾ ಆಡಳಿತವತಿಯಿಂದ ಸತ್ಕರಿಸಲಾಗುವದು ಎಂದರು ,

ವೇದಿಕೆ ಮೇಲೆ ಬಹಳ ಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ ಎಚ್ ವಿ, ಗ್ರೇಡ್ 2 ತಹಸಿಲ್ದಾರ ಕಿರಣ ಬೆಳವಿ, ಇ ಓ ಉಮೇಶ ಸಿದ್ನಾಳ ಉಪಸ್ಥಿತರಿದ್ದರು.
ಕೆ ಡಿ ಪಿ ಸಭೆಯಲ್ಲಿ ವಿವಿಧ ಇಲಾಖೆ ಅನುಷ್ಟಾನ ಅಧಿಕಾರಿಗಳು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಉಪಸ್ಥಿತರಿದ್ದರು.