ಕನ್ನಡದ ಕಬೀರ ಪದ್ಮಶ್ರೀ ಇಬ್ರಾಹಿಂ ಸುತಾರ್ ನಿಧನ ಹಿನ್ನೆಲೆಯಲ್ಲಿ ಸುತಾರ್ ನಿಧನಕ್ಕೆ ಜಾತ್ಯಾತೀತ ಇಂಚಗೇರಿ ಮಠದ ರೇವಣಸಿದ್ದೇಶ್ವರ ಶ್ರೀಗಳು ಸಂತಾಪ ವ್ಯಕ್ತಪಡಿಸಿದರು. ಜಾತ್ಯಾತೀತ ಇಂಚಗೇರಿ ಮಠದ ಜೊತೆಗೆ ಇಬ್ರಾಹಿಂ ಸುತಾರ್ ಅವಿನಾಭಾವ ಸಂಬಂಧವಿತ್ತು. ಇಬ್ರಾಹಿಂ ಅಗಲಿಕೆಗೆ ಕನ್ನಡ ನಾಡಿಗೆ ತುಂಬಲಾಗದ ನಷ್ಟ ಎಂದರು. ಸರ್ವ ಧರ್ಮಗಳ ಗ್ರಂಥಗಳನ್ನ ಅಧ್ಯಯನ ಮಾಡಿದ್ದರು. ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಬಾಂದವ್ಯ ಬೆಸೆಯುವ ಕೊಂಡಿಯಾಗಿದ್ದರು. ಸಮಾಜದಲ್ಲಿ ಸಮಾನತೆ ಸಾರಿದ್ದ ಸುತಾರ್ ನಿಧನದಿಂದ ಸಮಾಜ ಬಡವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.