Athani

ಅಥಣಿಯಲ್ಲಿ ಜಂಗಮ ಸಮಾಜದ ಮುಖಂಡರಿಂದ ಪ್ರತಿಭಟನೆ

Share

 

ಕುಡಚಿ ಶಾಸಕ ಪಿ ರಾಜು ಬೇಡ ಜಂಗಮ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದಲ್ಲದೆ ನಮ್ಮ ಸಮಾಜದ ಬಗ್ಗೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದು ಮತ್ತು ಬಿದರ ಜಿಲ್ಲೆಯ ಹುಮನಾಬಾದ್ ತಹಶೀಲ್ದಾರ್ ಪ್ರದೀಪ್ ಹಿರೇಮಠ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದರು,

ಅಥಣಿಯಲ್ಲಿ ಬೇಡ ಜಂಗಮ ಸಮಾಜದ ವತಿಯಿಂದ ಶೆಟ್ಟರ ಮಠದ ಮರುಳಸಿದ್ಧ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕುಡಚಿ ಶಾಸಕ ಪಿ ರಾಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಥಣಿ ತಹಶೀಲ್ದಾರ್ ದುಂಡಪ್ಪ ಕೊಮಾರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಇದೆ ಸಂದರ್ಭದಲ್ಲಿ ಬೇಡ ಜಂಗಮ ಸಮಾಜದ ಮುಖಂಡರಾದ ಚನ್ನಯ್ಯಾ ಇಟ್ನಾಳಮಠ ಮಾತನಾಡಿ ಕುಡಚಿ ಶಾಸಕ ಪಿ ರಾಜು ಅವರು ನಮ್ಮ ಸಮಾಜದ ಬಗ್ಗೆ ಅವಹೆಳನವಾಗಿ ಮಾತನಾಡಿ ಜಂಗಮ ಸಮಾಜದ ಬಗ್ಗೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದು ಖಂಡನಿಯ ಮತ್ತು ಹುಮಾನಬಾದ್ ತಹಶೀಲ್ದಾರ್ ಪ್ರದೀಪ್ ಹಿರೇಮಠ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಇಂದು ಪ್ರತಿಭಟನೆ ನಡೆಸಿದ್ದು ಘಟನೆಗೆ ಸಂಬಂಧಿಸಿದಂತೆ ತನೀಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನ ಆಗ್ರಹಿದರು.

ಇದೆ ಸಂದರ್ಭದಲ್ಲಿ ಜಂಗಮ ಸಮಾಜದ ಅಧ್ಯಕ್ಷ ಪಂಚಾಕ್ಷರಿ ಅಳ್ಳಿಮಟ್ಟಿ, ಪುಟ್ಟು ಹಿರೇಮಠ, ಶರಣು ವಸ್ತ್ರದ, ರಾಜಶೇಖರ ಪೂಜಾರಿ, ಗುರುಶಾಂತಯ್ಯ ಕರಡಿಮಠ, ಈರಯ್ಯಾ ಮಠಪತಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು

ರಾಕೇಶ ಮೈಗೂರ ಇನ್ ನ್ಯೂಜ ಅಥಣಿ

Tags:

error: Content is protected !!