State

ಅಂತಿಮ ಕೋರ್ಟ ಆದೇಶ ಬರೋವರೆಗೂ ಎಲ್ಲರೂ ಸಂಯಮದಿಂದ ವರ್ತಿಸಬೇಕು: ಸಿಎಂ ಬೊಮ್ಮಾಯಿ ಮನವಿ

Share

ಇವತ್ತಿನಿಂದ ಪಿಯುಸಿ, ಡಿಗ್ರಿ ಕಾಲೇಜು ಆರಂಭವಾಗುತ್ತಿವೆ. ಕೋರ್ಟ ಕೆಲವು ಆದೇಶಗಳನ್ನು ಕೊಟ್ಟಿದೆ. ಕೋರ್ಟನ ಆದೇಶವನ್ನು ನಾವೆಲ್ಲರೂ ಗೌರವಿಸಬೇಕು. ಅಂತಿಮ ಆದೇಶ ಬರೋವರೆಗೂ ಎಲ್ಲರೂ ಸಂಯಮದಿಂದ ನಡೆದುಕೊಳ್ಳಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಆರ್‍ಟಿ ನಗರ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಪಿಯುಸಿ, ಡಿಗ್ರಿ ಕಾಲೇಜಿನ ಒಳಗೆ ಇರುವ ವಿಚಾರಗಳನ್ನು ಅಲ್ಲಿಯ ಆಡಳಿತ ಮಂಡಳಿ, ಗುರುಗಳು, ಪೋಷಕರು, ವಿದ್ಯಾರ್ಥಿಗಳಿಗೆ ಬಗೆಹರಿಸಿಕೊಳ್ಳಲು ಬಿಡಬೇಕು. ಅಂದಾಗ ಮಾತ್ರ ಸೌಹಾರ್ದಯುತ ವಾತಾವರಣ ನಿರ್ಮಾಣ ಆಗುತ್ತದೆ.

ಆದ್ದರಿಂದ ಇಂದು ಪ್ರಾರಂಭವಾಗುತ್ತಿರುವ ಕಾಲೇಜುಗಳ ವಿಚಾರದಲ್ಲಿ ಆರಂಭಿಕ ಏನೇ ಗೊಂದಲಗಳು ಇದ್ದರೂ ಅವುಗಳನ್ನು ನಿವಾರಣೆ ಮಾಡಿ, ಮಕ್ಕಳು ವಿದ್ಯಾರ್ಜನೆ ಮಾಡುವುದು ಬಹಳ ಮುಖ್ಯ. ಆ ವಿದ್ಯಾರ್ಜನೆಗೆ ಮುಕ್ತವಾದ ವಾತಾವರಣ ನಿರ್ಮಾಣ ಮಾಡಲು ಎಲ್ಲರೂ ಸಹಕಾರ ಮಾಡಬೇಕು ಮತ್ತು ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿಕೊಂಡರು.

Tags:

error: Content is protected !!