Belagavi

ಬೆಳಗಾವಿಯಲ್ಲಿ ಅದ್ಧೂರಿ ಕೆಂಪೇಗೌಡ ಜಯಂತ್ಯೋತ್ಸವ ಆಚರಣೆ

Share

ಬೆಳಗಾವಿಯಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತ್ಯೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಬೆಂಗಳೂರು ನಗರದ ಇತಿಹಾಸ, ಕೆಂಪೇಗೌಡರ ದೂರದೃಷ್ಟಿ ಹಾಗೂ ಅವರ ಕುಟುಂಬದ ತ್ಯಾಗವನ್ನು ಸ್ಮರಿಸುವ ಮೂಲಕ ಗಣ್ಯರು ನಾಡಪ್ರಭುವಿಗೆ ಗೌರವ ನಮನ ಸಲ್ಲಿಸಿದರು.

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತ್ಯೋತ್ಸವವನ್ನು ಬೆಳಗಾವಿ ನಗರದ ಬಸವರಾಜ್ ಕಟ್ಟಿಮನಿ ಸಭಾಗೃಹದಲ್ಲಿ ಆಯೋಜಿಸಲಾಗಿತ್ತು.

ಈ ವೇಳೆ ಪ್ರೋಫೆಸರ್ ಗೀತಾ ಧರೆನ್ನವರ್ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಯಾವುದೇ ಜಾತಿ ಅಥವಾ ಧರ್ಮದ ಭೇದಭಾವ ಮಾಡದೆ, ಜನರ ವೃತ್ತಿ ಕೌಶಲ್ಯಗಳಿಗೆ ಅನುಗುಣವಾಗಿ ಅಕ್ಕಿ ಪೇಟೆ, ಅರಳಿ ಪೇಟೆ, ಕುಂಬಾರ ಪೇಟೆ ಸೇರಿದಂತೆ ಒಟ್ಟು 64 ಪೇಟೆಗಳನ್ನು ನಿರ್ಮಿಸಿಕೊಟ್ಟಿದ್ದರು ಎಂಬುದನ್ನು ವಿವರಿಸಿದರು. ಸದ್ಯ ಇತಿಹಾಸಕಾರರ ಪ್ರಕಾರ 54 ಪೇಟೆಗಳು ಮಾತ್ರ ಲಭ್ಯವಿದ್ದು, ಉಳಿದ 10 ಪೇಟೆಗಳನ್ನು ಹುಡುಕಬೇಕಾಗಿದೆ ಎಂದು ತಿಳಿಸಿದರು. ಇತಿಹಾಸದ ಈ ಮಹತ್ವದ ನಿರ್ಧಾರಗಳೊಂದಿಗೆ, ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿಯ ಆತ್ಮಾರ್ಪಣೆಯ ಗೌರವಾರ್ಥವಾಗಿ ಬೆಂಗಳೂರಿನ ಪಾಲಿಕೆ ಮುಂದೆ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಅವರು ಸ್ಮರಿಸಿದರು. ಬೈಟ್

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಲಿಂಗಾಯಿತ ಸಂಘಟನೆಯ ಪ್ರಮುಖರಾದ ಬಸವರಾಜ್ ರೊಟ್ಟಿ, ರಾಜಶೇಖರ್ ತಳವಾರ್, ಅಶೋಕ್ ಮಳಗಲಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!