hubbali

ಆರ್.ಟಿ.ಪಿ.ಸಿ.ಆರ್ ವರದಿಗೆ ಜನರ ಪರದಾಟ: ಸಕಾಲಕ್ಕೆ ಬಾರದೇ ಜನರಲ್ಲಿ ಆತಂಕ

Share

ರಾಜ್ಯದಲ್ಲಿ ಕೋವಿಡ್ ಆರ್ಭಟ ಮತ್ತೆ ಹೆಚ್ಚಾಗ್ತಿದೆ. ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವವರ ಸಂಖ್ಯೆಯು ದುಪ್ಪಾಟ್ಟಾಗಿದೆ. ಆದರೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಕೋವಿಡ್ ಟೆಸ್ಟ್ ವರದಿಗಳು ಸಕಾಲಕ್ಕೆ ಸಿಗದೆ ಸೊಂಕಿತರು ಪರದಾಡುತ್ತಿದ್ದಾರೆ. ಯಾಕೆ ಅಂತೀರಾ ಈ ವರದಿ ನೋಡಿ..

ಕಳೆದೊಂದು ವಾರದಿಂದ ಕೋವಿಡ್ ಸೊಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ. ಸರಕಾರ ಕೋವಿಡ್ ಟೆಸ್ಟ್ ಮತ್ತೆ ಹೆಚ್ಚಳ ಮಾಡಿದೆ. ಆದರೆ ಉತ್ತರ ಕರ್ನಾಟಕದ ಸಂಜೀವಿನಿ ಎನಿಸಿಕೊಂಡಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಕೋವಿಡ್ ಟೆಸ್ಟ್ ಮಾಡಿಸಿದವರು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿರುವ ಲ್ಯಾಬ್ ನಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದು, ಕೋವಿಡ್ ವರದಿಗಳು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ.‌ ಸಾಕಷ್ಟು ಜನರು ಟೆಸ್ಟ್ ಮಾಡಿಸಿದರು ಸಕಾಲಕ್ಕೆ ವರದಿಗಳು ಅವರ ಕೈ ಸೇರದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಧಾರವಾಡ ಜಿಲ್ಲಾಡಳಿತ ಕೋವಿಡ್ ಸೊಂಕಿತರ ಸಂಖ್ಯೆಯಲ್ಲಿ ಹೆಚ್ಚಳ ವಾಗ್ತಿದ್ದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆಗೆ ಸಬೆ ನಡೆಸಿ, ಕೋವಿಡ್ ಮೂರನೇ ಅಲೆ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ಮಾಡಿದೆ. ಜಿಲ್ಲೆಯಲ್ಲಿ ಟೆಸ್ಟ್ ಗಳನ್ನ ಹೆಚ್ಚಿಗೆ ಮಾಡಲು ಸೂಚನೆ ನೀಡಿದ್ದಾರೆ. ಇದರಂತೆ ಪ್ರತಿನಿತ್ಯ ನಾಲ್ಕು ಸಾವಿರಕ್ಕೂ ಹೆಚ್ಚು ಕೋವಿಡ್ ಟೆಸ್ಟ್ ಮಾಡುತ್ತಿರುವ ಜಿಲ್ಲಾ ಆಡಳಿತಕ್ಕೆ ಸರ್ವರ್ ಸಮಸ್ಯೆ ಎದುರಾಗಿದ್ದು, ಕೋವಿಡ್ ವರದಿ ನೀಡಲು ವಿಳಂಭವಾಗುತ್ತಿದೆ. ಎಲ್ಲೆಡೆಯೂ ಈ ಸರ್ವರ್ ಸಮಸ್ಯೆ ಎದುರಾಗಿದ್ದು ಶೀಘ್ರದಲ್ಲಿ ಬಗೆಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಿದ್ದಾರೆ.

ಆರ್ ಟಿಪಿಸಿಆರ್ ಸರ್ವರ್ ತೊಂದರೆ ಈ ಭಾಗದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಆದಷ್ಟು ಬೇಗ ಸರಕಾರ ಈ ಸಮಸ್ಯೆಗೆ ಸ್ಪಂದಿಸಿ ಸರ್ವರ್ ಸಮಸ್ಯೆ ಯನ್ನ ಬಗೆ ಹರಿಸಿ ಕೋವಿಡ್ ವರದಿಗಳನ್ನ ನೀಡಲು ಮುಂದಾಗಬೇಕಿದೆ.

Tags:

error: Content is protected !!