Chikkodi

ಸಕ್ಕರೆ ಕಾರ್ಖಾನೆಗಳ ಆರಂಭದ ಬೆನ್ನಲ್ಲೇ ಟ್ರ್ಯಾಕ್ಟರ್ ಅಪಘಾತ ಹೆಚ್ಚಳ: ರೈತರಿಗೆ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ ಕಟ್ಟುನಿಟ್ಟಿನ ಸೂಚನೆ

Share

ಕಬ್ಬು ನುರಿಸುವ ಹಂಗಾಮು ಪ್ರಾರಂಭವಾದ ಬೆನ್ನಲ್ಲೇ ಚಿಕ್ಕೋಡಿ ಹಾಗೂ ನಿಪ್ಪಾಣಿ ಭಾಗದ ರಸ್ತೆಗಳಲ್ಲಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳ ಸಂಚಾರ ಹೆಚ್ಚಾಗಿದ್ದು, ಸರಣಿ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅಪಘಾತಗಳನ್ನು ತಡೆಗಟ್ಟಲು ರೈತರು ಮತ್ತು ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಚಿಕ್ಕೋಡಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ ಸೂಚನೆ ನೀಡಿದ್ದಾರೆ.

ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು‌
​ಇತ್ತೀಚೆಗೆ ಚಿಕ್ಕೋಡಿ ಮತ್ತು ನಿಪ್ಪಾಣಿ ವ್ಯಾಪ್ತಿಯಲ್ಲಿ ಸುಮಾರು 7 ರಿಂದ 8 ಟ್ರ್ಯಾಕ್ಟರ್ ಸಂಬಂಧಿತ ಅಪಘಾತಗಳು ದಾಖಲಾಗಿವೆ. ರಸ್ತೆ ಬದಿಯಲ್ಲಿ ಒಂದು ಟ್ರೈಲರ್ ನಿಲ್ಲಿಸಿ ಮತ್ತೊಂದು ಟ್ರೈಲರ್ ತರಲು ಹೋದಾಗ, ನಿಂತ ಟ್ರೈಲರ್ ಕಾಣದೆ ದ್ವಿಚಕ್ರ ವಾಹನ ಸವಾರರು ಹಿಂದಿನಿಂದ ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಕಾರ್ಖಾನೆಗೆ ಕಬ್ಬು ಇಳಿಸಿ ವಾಪಸ್ ಬರುವಾಗ ಟ್ರ್ಯಾಕ್ಟರ್‌ಗಳನ್ನು ಅತಿವೇಗವಾಗಿ ಚಲಾಯಿಸುತ್ತಿರುವುದು ಹಾಗೂ ಹಂಪ್ಸ ಗಮನಿಸದೆ ವಾಹನ ಪುಟಿದು ಸದಲ್ಗ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆಯೂ ನಡೆದಿದೆ.

​​ಟ್ರ್ಯಾಕ್ಟರ್ ಚಲಾಯಿಸುವವರು ಕಡ್ಡಾಯವಾಗಿ ಚಾಲನಾ ಪರವಾನಗಿ ಹೊಂದಿರಬೇಕು.
​ವಾಹನಕ್ಕೆ ಮಾತ್ರವಲ್ಲದೆ, ಚಾಲಕರಿಗೂ ಕಡ್ಡಾಯವಾಗಿ ವಿಮೆ (ಇನ್ಶೂರೆನ್ಸ್) ಮಾಡಿಸಿರಬೇಕು.
​ಟ್ರ್ಯಾಕ್ಟರ್ ಜೊತೆಗೆ, ನೋಂದಣಿ ಇಲ್ಲದೆ ಸಂಚರಿಸುತ್ತಿರುವ ಟ್ರೈಲರ್‌ಗಳಿಗೂ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು.
​ಯಾವುದೇ ಕಾರಣಕ್ಕೂ ರಸ್ತೆ ಬದಿಯಲ್ಲಿ ಟ್ರೈಲರ್‌ಗಳನ್ನು ನಿಲ್ಲಿಸಬಾರದು ಹಾಗೂ ವೇಗದ ಮಿತಿಯನ್ನು ಕಾಯ್ದುಕೊಳ್ಳಬೇಕು.
​ರೈತರು ಮತ್ತು ವಾಹನ ಮಾಲೀಕರು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಡಿವೈಎಸ್ಪಿ ಗೋಪಾಲಕೃಷ್ಣ ಗೌಡ ಕೋರಿದ್ದಾರೆ.

Tags:

error: Content is protected !!