Chikkodi

ಚಿಕ್ಕೋಡಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

Share

ಪಟ್ಟಣದ ಹಳೆ ಪುರಸಭೆ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಗಣ್ಯರು ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪೂಜೆ ನೆರವೇರಿಸಿದರು.

​ಕಾರ್ಯಕ್ರಮದಲ್ಲಿ ಮಾತನಾಡಿದ ಪುರಸಭೆ ಸದಸ್ಯ ರಾಮಾ ಮಾನೆ ಹಾಗೂ ಈರಫಾನ್ ಬೇಪಾರಿ ಅವರು, ಟಿಪ್ಪು ಸುಲ್ತಾನ್ ಅವರ ಆಡಳಿತ ವೈಖರಿ, ಜನಪರ ಯೋಜನೆಗಳು ಹಾಗೂ ಐತಿಹಾಸಿಕ ಕೊಡುಗೆಗಳ ಕುರಿತು ವಿವರಿಸಿದರು.

​ಈ ಸಂದರ್ಭದಲ್ಲಿ ರಾಮಾ ಮಾನೆ, ಹುಸೇನ ಘಾಲವಡೆ, ರಿಜ್ವಾನ ಕೆವಾಡಕರ, ತೌಸಿಪ್ ನದಾಫ್, ಜೂಬೇರ ಖಾನಭಾಯಿ,ಅಯಾಜ್ ಮಕಾನದಾರ, ಖಾದರ ಕಮತೆ, ಈರಫಾನ್ ಬೇಪಾರಿ, ಗುಲಾಬ ಹುಸೇನ ಬಾಗವಾನ, ಸಾಬೀರ ಜಮಾದಾರ, ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ ಸೇರಿದಂತೆ ಹಲವು ಗಣ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Tags:

error: Content is protected !!