Athani

ಬಸವೇಶ್ವರರ ಕುರಿತು ಅವಹೇಳನಕಾರಿ ಬರಹಕ್ಕೆ ಆಕ್ರೋಶ: ರವಿ ಹಂಜ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಅಥಣಿಯಲ್ಲಿ ಪ್ರತಿಭಟನೆ!

Share

ಬಸವ ಮಂಟಪ ಪುಸ್ತಕದಲ್ಲಿ ಜಗಜ್ಯೋತಿ ಬಸವೇಶ್ವರರ ಕುರಿತು ಪ್ರಕಟವಾಗಿರುವ ಅವಹೇಳಿನಕಾರಿ ಬರಹದ ಬಗ್ಗೆ ಪ್ರತಿಭಟನೆ ಹಾಗೂ ರವಿ ಹಂಜ್ ಮೇಲೆ ಸೂಕ್ತ ಕಾನೂನು ಕ್ರಮ ಕೊಳ್ಳಬೇಕೆಂದು ಸಾಂಕೇತಿಕವಾಗಿ ಅಥಣಿಯ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು

12ನೇ ಶತಮಾನದ ಮಹಾನ್ ಸಮಾಜ ಸುಧಾರಕರಾದ ಜಗಜ್ಯೋತಿ ಬಸವೇಶ್ವರರು ಸಮಾನತೆ ಕಾಯಕ ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾನ್ ಚೇತನರಾಗಿದ್ದಾರೆ ಅವರ ತತ್ವದರ್ಶನಗಳನ್ನು ಇಂದಿಗೂ ಸಮಾಜಕ್ಕೆ ದಾರಿ ದೀಪವಾಗಿವೆ

ಆದರೆ ರವಿ ಹಂಜ್ ಅವರು ಬರೆದಿರುವ ಬಸವ ಮಂಟಪ ಪುಸ್ತಕದಲ್ಲಿ ಜಗಜ್ಯೋತಿ ಬಸವೇಶ್ವರ ಕುರಿತು ಅವಹೇಳಿನಕಾರಿ ಬರಹ ಬಸವ ಅಭಿಮಾನಿಗಳ ಗಮನಕ್ಕೆ ಬಂದಿದ್ದು ಈ ಬರಹವನ್ನು ಬಸವಣ್ಣನವರ ಅನುಯಾಯಿಗಳು ಹಾಗೂ ಬಸವ ಅಭಿಮಾನಿಗಳ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ

ಜಗಜ್ಯೋತಿ ಬಸವೇಶ್ವರರು ಸಮಾಜದಲ್ಲಿ ಸಮಾನತೆ ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯವನ್ನು ಸಾರಿದ ಮಹಾನ್ ವ್ಯಕ್ತಿತ್ವವಾಗಿದ್ದು ಅವರ ಘನತೆ ಹಾಗೂ ತತ್ವಾ ದರ್ಶಗಳಿಗೆ ಧಕ್ಕೆ ಉಂಟುಮಾಡುವಂತಹ ಬರಹದ ಕುರಿತು ಸಮಸ್ತ ಬಸವ ಭಕ್ತರಿಗೆ ತೀವ್ರ ನೋವು ಉಂಟು ಮಾಡಿದ ಈ ವಿಷಯದ ಕುರಿತು ನಾವು ಬಸವಭಕ್ತರು ತೀವ್ರವಾಗಿ ಖಂಡಿಸುತ್ತೇವೆ ಹಾಗೂ ರವಿ ಹಂಜ್ ಜೊತೆಗೆ ಇರುವ ಹಿಂದೆ ಜೊತೆಗೂಡಿ ಈ ದುಷ್ಟ ಕಾರ್ಯದಲ್ಲಿ ಕೈಜೋಡಿಸಿದ ಎಲ್ಲರ ಮೇಲು ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ಗುರಿಪಡಿಸಬೇಕೆಂದು ನಾಡಿನ ಸಮಸ್ತ ಬಸವ ಭಕ್ತರ ಪರವಾಗಿ ಸರ್ಕಾರಕ್ಕೆ ಒತ್ತಾಯಿಸಿತುವೆ ಎಂದು ಹೇಳಿ ಅಥಣಿ ತಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು

Tags:

error: Content is protected !!