Belagavi

ಬಸವಣ್ಣ ವಿರೋಧಿ ಗಾಳಿ ಜೋರಾಗದಂತೆ ತಡೆಯಲು ಜನರು ಮೌನ ಮುರಿಯಬೇಕು

Share

ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧದ ಧ್ವನಿಗಳು ಈಗಾಗಲೇ ಶುರುವಾಗಿದ್ದು, ಜನರು ಸುಮ್ಮನಿದ್ದರೆ ಈ ವಿರೋಧದ ಗಾಳಿ ಮತ್ತಷ್ಟು ಜೋರಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಕೇವಲ ನಾಯಕರು ಮಾತ್ರವಲ್ಲದೆ ಸಾರ್ವಜನಿಕರೇ ಮೌನ ಮುರಿದು ಸಾಮೂಹಿಕವಾಗಿ ಧ್ವನಿ ಎತ್ತಬೇಕು ಎಂದು ಅವರು ಕರೆ ನೀಡಿದ್ದಾರೆ.

ಬಸವಣ್ಣನವರ ವಿರುದ್ಧ ಮಾತನಾಡುವ ಪ್ರವೃತ್ತಿ ಈಗಾಗಲೇ ಆರಂಭವಾಗಿದ್ದು, ಇದರ ಹಿಂದಿರುವವರು ಸದ್ಯ ‘ಟ್ರಯಲ್’ ನೋಡುತ್ತಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಆತಂಕ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ಮೇಲಿನ ದಾಳಿ ಶುರುವಾಗಿದ್ದು, ಜನರು ಹೀಗೆಯೇ ಮೌನವಾಗಿದ್ದರೆ ಮುಂದೊಂದು ದಿನ ಬಸವಣ್ಣನವರೂ ‘ಕಾಲ್ಪನಿಕ’ ಅಥವಾ ಇರಲೇ ಇಲ್ಲ ಎಂಬ ಹೇಳಿಕೆಗಳು ಬರಬಹುದು; ಆಗಲೂ ಸಾರ್ವಜನಿಕರು ಸುಮ್ಮನೆ ಕುಳಿತಿರುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಬಸವಣ್ಣ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಪ್ರಶ್ನಿಸಿದಾಗ ಪ್ರತಿಯೊಬ್ಬರೂ ವಿರೋಧಿಸಿ ಮಾತನಾಡಬೇಕು ಎಂದು ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ. ಇಂದು ವಿರೋಧ ವ್ಯಕ್ತಪಡಿಸಲು ಮತ್ತು ಅಭಿಪ್ರಾಯ ಹಂಚಿಕೊಳ್ಳಲು ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಫೋನ್‌ಗಳಿವೆ. ಹೀಗಾಗಿ, ಕೇವಲ ನಾಯಕರಷ್ಟೇ ಅಲ್ಲದೆ ಸಮೂಹದಿಂದಲೇ ತಕ್ಕ ಪ್ರತಿಕ್ರಿಯೆ ಬರಬೇಕು ಹಾಗೂ ಯಾರು ಯಾರನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಎಲ್ಲರೂ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

Tags:

error: Content is protected !!