Dharwad

ಧಾರವಾಡ: ಕಸಕ್ಕೆ ಹಚ್ಚಿದ ಬೆಂಕಿ ತಗುಲಿ ಮಿನಿ ಗೂಡ್ಸ್ ವಾಹನ ಭಸ್ಮ; ಅಗ್ನಿಶಾಮಕ ದಳದಿಂದ ತಪ್ಪಿದ ಭಾರೀ ಅನಾಹುತ

Share

ಧಾರವಾಡದ ಛತ್ರಪತಿ ಶಿವಾಜಿ ವೃತ್ತದ ಬಳಿ ಕಸದ ಬೆಂಕಿ ವಾಹನಕ್ಕೆ ತಗುಲಿ ಅವಾಂತರ ಸೃಷ್ಟಿಯಾಗಿದೆ. ಬೆಂಕಿಯಿಂದ ಮಿನಿ ಗೂಡ್ಸ್ ವಾಹನ ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಧಾರವಾಡ ಛತ್ರಪತಿ ಶಿವಾಜಿ ವೃತ್ತದ ಕಾಟನ್ ಮಾರ್ಕೆಟ್ ಬಳಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ದುರಸ್ತಿಯಾಗಿ ನಿಂತಿದ್ದ ವಾಹನದ ಪಕ್ಕದಲ್ಲಿದ್ದ ಕಸಕ್ಕೆ ಬೆಂಕಿ ಹಚ್ಚಲಾಗಿದೆ. ಇದೇ ಬೆಂಕಿ ನಂತರ ದುರಸ್ತಿಯಾಗಿದ್ದ ವಾಹನಕ್ಕೂ ತಗುಲಿ, ನೋಡು ನೋಡುತ್ತಿದ್ದಂತೆ ಮಿನಿ ಗೂಡ್ಸ್ ವಾಹನ ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಮಿನಿ ಗೂಡ್ಸ್ ವಾಹನದ ಪಕ್ಕದಲ್ಲಿದ್ದ ಇನ್ನೊಂದು ಗೂಡ್ಸ್ ವಾಹನಕ್ಕೆ ಬೆಂಕಿ ವ್ಯಾಪಿಸುವುದನ್ನು ತಪ್ಪಿಸಿ, ಮತ್ತೊಂದು ಅವಾಂತರವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ತಡೆದಿದ್ದಾರೆ. ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:

error: Content is protected !!