Belagavi

ಬೆಳಗಾವಿಯಲ್ಲಿ KSRTC ಬಸ್‌ಗಳ ‘ವಿಷದ ಹೊಗೆ’ ಅಬ್ಬರ: ಉದ್ಯಮಬಾಗ ರಸ್ತೆಯಲ್ಲಿ ಸಾರ್ವಜನಿಕರಿಗೆ ಸಂಕಷ್ಟ!!!

Share

ಬೆಳಗಾವಿಯ ಪ್ರಮುಖ ಭಾಗವಾಗಿರುವ ಉದ್ಯಮಬಾಗ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು ಬಿಡುತ್ತಿರುವ ದಟ್ಟವಾದ ಕಪ್ಪು ಹೊಗೆಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ಸರಿಯಾದ ನಿರ್ವಹಣೆಯಿಲ್ಲದೆ ರಸ್ತೆಗಿಳಿದಿರುವ ಈ ಹಳೇ ಬಸ್‌ಗಳು ಪರಿಸರಕ್ಕೆ ಮಾರಕವಾಗಿದ್ದು, ಜನರ ಉಸಿರಾಟಕ್ಕೂ ಕುತ್ತು ತಂದಿದೆ.

ಬೆಳಗಾವಿಯ ಉದ್ಯಮಬಾಗ ರಸ್ತೆಯಲ್ಲಿ ಪ್ರತಿದಿನ ಸಂಚರಿಸುವ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗಳು ಯಾಂತ್ರಿಕ ದೋಷ ಮತ್ತು ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಅತಿಯಾದ ಕಪ್ಪು ಹೊಗೆಯನ್ನು ಉಗುಳುತ್ತಾ ಪರಿಸರ ಮಾಲಿನ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತಿವೆ. ಈ ರಸ್ತೆಯಲ್ಲಿ ದಟ್ಟ ಹೊಗೆಯ ಅಬ್ಬರ ಹೆಚ್ಚಾಗಿರುವುದರಿಂದ ಬೆಳಿಗ್ಗೆ ಮತ್ತು ಸಂಜೆಯ ವೇಳೆ ಸಂಚರಿಸುವ ಪಾದಾಚಾರಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಶಾಲಾ ಮಕ್ಕಳು ಕಣ್ಣುರಿ ಮತ್ತು ಉಸಿರಾಟದ ಸಮಸ್ಯೆಯಿಂದ ಪರದಾಡುವಂತಾಗಿದೆ. ಇಲಾಖೆಯ ಈ ನಿರ್ಲಕ್ಷ್ಯದ ಧೋರಣೆಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಮಾಲಿನ್ಯಕಾರಕ ಬಸ್‌ಗಳ ಸಂಚಾರಕ್ಕೆ ಕಡಿವಾಣ ಹಾಕಿ, ಪ್ರಯಾಣಿಕರಿಗೆ ಶುದ್ಧ ವಾತಾವರಣ ಕಲ್ಪಿಸಿಕೊಡುವಂತೆ ಆಗ್ರಹಿಸಿದ್ದಾರೆ.

Tags:

error: Content is protected !!