Chikkodi

ನವೆಂಬರ್ 23ಕ್ಕೆ ‘ಜೊಲ್ಲೆ ಧ್ವನಿ 88.4’ ಗಡಿನಾಡಿನ ಹೊಸ ಕನ್ನಡ ಎಫ್.ಎಮ್. ರೇಡಿಯೋ ಲೋಕಾರ್ಪಣೆ: ಬಸವಪ್ರಸಾದ್ ಜೊಲ್ಲೆ

Share

ಮಾಜಿ ಸಚಿವೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅವರ ಹುಟ್ಟುಹಬ್ಬದ (ನವೆಂಬರ್ 20) ವಿಶೇಷ ನಿಮಿತ್ತವಾಗಿ ಜೊಲ್ಲೆ ಎಜುಕೇಶನ್ ಸೊಸೈಟಿ ವತಿಯಿಂದ ಗಡಿನಾಡ ಭಾಗದ ಜನರಿಗಾಗಿ ಜೊಲ್ಲೆ ಧ್ವನಿ 88.4 – ಗಡಿನಾಡಿನ ಧ್ವನಿ ಎಂಬ ವಿನೂತನ ಕನ್ನಡ ರೇಡಿಯೋ ಎಫ್.ಎಮ್. ಅನ್ನು ನವೆಂಬರ್ 23 ರಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಗುತ್ತಿದೆ ಜೊಲ್ಲೆ ಗ್ರುಪ್ ನ ಉಪಾಧ್ಯಕ್ಷ ಬಸವಪ್ರಸಾದ್ ಜೊಲ್ಲೆ ತಿಳಿಸಿದರು.

ಅವರು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಸಂಸ್ಥೆಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರೇಡಿಯೋ ಶುಭಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಕುರಿತು ವಿವರ ನೀಡಿದರು.
ಚಿಕ್ಕೋಡಿ ಹಾಗೂ ಗಡಿಭಾಗದ ಜನರು ಹೆಚ್ಚಾಗಿ ಮರಾಠಿ ರೇಡಿಯೋ ಎಫ್.ಎಮ್‌ಗಳನ್ನು ಕೇಳುತ್ತಿದ್ದು, ನಮ್ಮದೇ ಆದ ಸ್ವಂತ ಕನ್ನಡ ಎಫ್.ಎಮ್. ಇರಬೇಕೆಂಬ ಉದ್ದೇಶದಿಂದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಕಳೆದ 6 ತಿಂಗಳಿನಿಂದ ಯೋಜನೆ ರೂಪಿಸಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಅಗತ್ಯ ಪರವಾನಗಿ ಪಡೆಯಲಾಗಿದೆ.
ಗಡಿನಾಡಿನ ಧ್ವನಿಎಂಬ ಟ್ಯಾಗ್‌ಲೈನ್ ನೀಡಲಾಗಿದ್ದು, ಇದು ದಿನದ 24 ಗಂಟೆಯೂ ಪ್ರಸಾರವಾಗಲಿದೆ. ಕೃಷಿ ತಜ್ಞರ ಸಂದರ್ಶನಗಳು ಮತ್ತು ಉಪಯುಕ್ತ ಮಾಹಿತಿ.ಗೃಹಿಣಿಯರ ಆರೋಗ್ಯ, ಅಡುಗೆ ಹಾಗೂ ಜೀವನಶೈಲಿಗೆ ಸಂಬಂಧಿಸಿದ ತಜ್ಞರ ಸಲಹೆಗಳು.
ಉದ್ಯಮಶೀಲತೆ ಯುವ ಸಬಲೀಕರಣ ಮತ್ತು ಭಾರತೀಯ ಸಂಸ್ಕೃತಿ ಕುರಿತು ವಿಶೇಷ ಕಾರ್ಯಕ್ರಮಗಳು ಹಾಗೂ ಉತ್ತಮ ಸಂಗೀತ ಪ್ರಸಾರವಾಗಲಿದೆ.

ನವೆಂಬರ್ 23ರ ಸಾಯಂಕಾಲ 5 ಗಂಟೆಗೆ ರೇಡಿಯೋ ಎಫ್.ಎಮ್. ಸ್ಟುಡಿಯೋ ಉದ್ಘಾಟನೆ ಹಾಗೂ ಶಶಿಕಲಾ ಜೊಲ್ಲೆ ಅವರ ಹುಟ್ಟುಹಬ್ಬ ಆಚರಣೆ ನಡೆಯಲಿದೆ.ಈ ಶುಭ ಸಂದರ್ಭದಲ್ಲಿ ‘ಝೀ ಕನ್ನಡ ಸರಿಗಮಪ’ ಖ್ಯಾತಿಯ ಜನಪ್ರಿಯ ಗಾಯಕ ಶ್ರೀಹರ್ಷ ಹಾಗೂ ಅವರ 14 ಜನರ ತಂಡದಿಂದ ಭಜನಾ ಭಾರತ ಎಂಬ ವಿಶೇಷ ಸಾಂಸ್ಕೃತಿಕ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಬಸವಪ್ರಸಾದ್ ಜೊಲ್ಲೆ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಜ್ಯೋತಿಪ್ರಸಾದ ಜೊಲ್ಲೆ, ಬಹದ್ದೂರ್ ಗುರುವ,ಎಮ್ .ಎಮ್.ಪಾಟೀಲ, ಸಂತೋಷ ಪಾಟೀಲ ಉಪಸ್ಥಿತರಿದ್ದರು.

Tags:

error: Content is protected !!