ಕ್ಷೇತ್ರದ ಕುಂದರನಾಡು ವಿವಿಧ ಕ್ಷೇತ್ರಗಳಲ್ಲಿ ಯ ಗಣನೀಯ ಸಾಧನೆ ಅದ್ವಿತೀಯವಾಗಿದ್ದು, ಇಂಥ ಅಪರೂಪದ ನಾಡಿನಲ್ಲಿಯ ಸರ್ವ ಜನತೆಯ ಪ್ರೀತಿ, ವಿಶ್ವಾಸ ಗಳಿಸಲು ನಾನು ಕೈಗೊಂಡ ಕ್ಷೇತ್ರದ ಅಭಿವ್ರದ್ಧಿಯೊಂದಿಗೆ ನನಗೆ ಮಹಾ ತಪಸ್ವಿ ಅಡವಿಸಿದ್ದೇಶ್ವರ ರ ಕ್ರಪೆಯೇ ಕಾರಣ ಎಂಬುದನ್ನು ಅಭಿಮಾನದಿಂದ ಹೇಳುವೆ ಈ ಹೊಸ ಸೇತುವೆಗಳು ಸರ್ವ ಜನಾಂಗದ ಪ್ರೀತಿ, ವಿಶ್ವಾಸಗಳ ಗಟ್ಟಿ ಸೇತುವೆಗಳಾಗಲಿ ಎಂದು ಗೋಕಾಕ ಶಾಸಕ ರಮೇಶ
ಜಾರಕೀಹೊಳಿ ಹೇಳಿದರು.

ಅವರು ಬುಧವಾರ. ಅಂಕಲಗಿಯಲ್ಲಿ ಜರುಗಿದ ಅಂಕಲಗಿ ಮತ್ತು ಅಕ್ಕತಂಗೇರಹಾಳ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ೧೨ ಕೋಟಿ ೧೦ ಲಕ್ಷ ಅನುದಾನದಲ್ಲಿ ಬಳ್ಳಾರಿ ನಾಲಾ ನವ ಸೇತುವೆ , ಮಂಜೂರಿ ಹಂತದ ೪ ಕೋಟಿ ೯೦ ಲಕ್ಷ ಅನುದಾನದಲ್ಲಿ ಕೆ ಇ ಬಿ ಸೇತುವೆ ಮತ್ತು ಅಂಕಲಗಿ ಹಳೆ ಬಸ್ ತಂಗುದಾನ ಹತ್ತಿರದ. ಸ್ಥಳೀಯ ಶಾಸಕರ ೨೦ ಲಕ್ಷ ಅನುದಾನ ದಡಿಯಲ್ಲಿ ನೂತನ ಶ್ರೀ ಅಡವಿಸಿದ್ದೇಶ್ವರ ಪಾದಗಟ್ಟೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಮಳೆಗಾಲದಲ್ಲಿ ಆಗಾಗ ಬಳ್ಳಾರಿ ನಾಲಾ ಮಹಾಪೂರ ದಿಂದ. ಅಡವಿಸಿದ್ದೇಶ್ವರ ಮಠದ ಹತ್ತಿರದ ರಸ್ತೆ ಸಂಚಾರ ಸ್ಥಗಿತಗೊಂಡು ಸಾಕಷ್ಟು ಬಾರಿ ತೊಂದರೆ ಅನುಭವಿಸವಂತಾಗಿತ್ತು.

ಮಠದ ಹತ್ತಿರ ಮತ್ತು ಗಡ್ಡೆ ಪೂಲ ಬಳಿಯ ಕಿರಿದಾದ ಮೂರು
ಸೇತುವೆಗಳಿಂದ ಆಗುವ ತೊಂದರೆ ಗಮನಿಸಿ ೩ ಸೇತುವೆಗಳನ್ನು ಎತ್ತರಿಸಬೇಕೆಂದು ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ . .ಗುಣಮಟ್ಟದಲ್ಲಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಬೇಕು ಎಂಬುದನ್ನು ಗುತ್ತಿಗೆದಾರರು ಗಮನಿಸಬೇಕು ಎಂದರಲ್ಲದೆ,
ಪರಸ್ಪರರ ನಡುವಿನ ದ್ವೇಷ, ವೈಶಮ್ಯಗಳನ್ನು ತೊರೆದು, ಎಲ್ಲರೂ ಒಗ್ಗಟ್ಟಾಗಿ ಹೆಜ್ಜೆ ಹಾಕೋಣ. ಅಭಿವ್ರದ್ಧಿ ಕುರಿತ ಯಾವುದೇ ಧ್ವನಿಗಳಿಗೆ ತಕ್ಷಣ ಸ್ಪಂದಿಸಿ ಕಾರ್ಯ ಮಾಡೋಣ. ಎಂದರಲ್ಲದೆ, ಅಭೂತಪೂರ್ವ ಸನ್ಮಾನ ಕೊಟ್ಟ ಅಭಿಮಾನಿಗಳಿಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದ ಹೇಳಿದರು.
ಅಡವಿಸಿದ್ಧೇಶ್ವರ ಮಠದ ಡಾ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಮತ್ತು ಮುನವಳ್ಳಿ ಶ್ರೀ ಸೋಮಶೇಖರ ಮಠದ ಮುರಘೇಂದ್ರ ಮಹಾಸ್ವಾಮಿಗಳು ಶಾಸಕ ರಮೇಶ ಜಾರಕೀಹೊಳಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಭೀಮಗೌಡಾ ಪೊಲೀಸಗೌಡರ, ಬಿಜೆಪಿ ಮಂಡಳ ಅದ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಟಿ ಆರ್ ಕಾಗಲ್, ಮಡ್ಡೆಪ್ಪಾ ತೋಳಿನವರ,
ರಾಜು ತಳವಾರ, ಆನಂದ ಅತ್ತುಗೋಳ , ಅಣ್ಣಾಸಾಹೇಬ ರಾಜಮಾನೆ, ರಾಮಣ್ಣಾ ಸುಂಬಳಿ, ಅಭಿಯಂತರರಾದ ಗಿರೀಶ ದೇಸಾಯಿ, ಸಂಜೀವ ಕುಮಾರ ಹುಲಕಾಯಿ, ಶಿವಲಿಂಗ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು, ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ, ಸುರೇಶ ಉರಬಿನಹಟ್ಟಿ
