Dharwad

KEA ನಡೆಸಿದ VAO, KSRP ಪರೀಕ್ಷೆಯಲ್ಲೂ ಅಕ್ರಮ ಶಂಕೆ: SIT ತನಿಖೆಗೆ ಅಭ್ಯರ್ಥಿಗಳ ಆಗ್ರಹ

Share

ಅದ್ಯಾಕೋ ಏನೋ, ಕರ್ನಾಟಕದಲ್ಲಿ ಪರೀಕ್ಷೆಗಳ ಅಕ್ರಮಗಳು ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಇಷ್ಟು ದಿನ ಕೆಪಿಎಸ್‌ಸಿ ವಿರುದ್ಧ ಅನೇಕ ಹೋರಾಟಗಳು ನಡೆದಿದ್ದವು, ಈಗ ಕೆಇಎ ನಡೆಸಿದ ಪರೀಕ್ಷೆಯಲ್ಲೂ ಅಕ್ರಮದ ವಾಸನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.

VO: ಇತ್ತೀಚೆಗೆ KPSC ಬದಲು KEA ನೇತೃತ್ವದಲ್ಲಿ ವಿಎಓ (VAO) ಹಾಗೂ ಕೆಎಸ್‌ಆರ್‌ಪಿ (KSRP) ಪರೀಕ್ಷೆಗಳು ನಡೆದಿದ್ದವು. ಈ ಪರೀಕ್ಷೆಗಳಲ್ಲೂ ಅಕ್ರಮದ ವಾಸನೆ ಹೊಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಓಎಂಆರ್ ಶೀಟ್ ಖಾಲಿ ಬಿಟ್ಟು ಬಂದ 30 ಅಭ್ಯರ್ಥಿಗಳಿಗೆ 80ಕ್ಕೂ ಅಧಿಕ ಅಂಕ ಬಂದಿರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. VAO ಪರೀಕ್ಷೆಯಲ್ಲಿ ಕೇವಲ 11 ಪ್ರಶ್ನೆಗಳಿಗೆ ಉತ್ತರ ಬರೆದಿದ್ದ ಅಭ್ಯರ್ಥಿ ಶಿವಾನಂದ ಪಾಟೀಲ ಎಂಬುವರಿಗೆ 80 ಕ್ಕೂ ಹೆಚ್ಚು ಅಂಕಗಳು ಬಂದಿವೆಯಂತೆ. ಹೀಗಾಗಿ ಓಎಂಆರ್ ಶೀಟ್ ಖಾಲಿ ಬಿಡುವಂತೆ ಮುಂಚಿತವಾಗಿಯೇ ಸೂಚನೆ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

ಉದ್ಯೋಗ ಕೊಡಿಸುವುದಾಗಿ ಯಾರೋ ಹಣ ಪಡೆದಿದ್ದರು ಎಂಬ ಆರೋಪವಿದ್ದು, ಉದ್ದೇಶಪೂರ್ವಕವಾಗಿಯೇ ಅಭ್ಯರ್ಥಿಗಳು ಓಎಂಆರ್ ಶೀಟ್ ಖಾಲಿ ಬಿಟ್ಟಿದ್ದಾರೆ. ಇಲ್ಲವಾದರೆ ಪ್ರಶ್ನೆ ಗೊತ್ತಿಲ್ಲದಿದ್ದರೆ 5 ನೇ ಆಯ್ಕೆಯನ್ನು ಭರ್ತಿ ಮಾಡಬೇಕಿತ್ತು. ಈಗಾಗಲೇ ಹಾವೇರಿಯ ಶಂಕರ್ ಬನ್ನೂರ ನಡೆಸಿದ ಅಕ್ರಮ ಬಯಲಾಗಿದ್ದು, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. KEA ಪರೀಕ್ಷೆ ನಡೆಸಿದರೂ ಪಾರದರ್ಶಕವಾಗಿ ನಡೆಯುತ್ತಿಲ್ಲ. ಹೀಗಾಗಿ SIT ರಚನೆ ಮಾಡಿ ಸಮಗ್ರ ತನಿಖೆ ನಡೆಸುವಂತೆ ಉದ್ಯೋಗಾಕಾಂಕ್ಷಿಗಳು ಆಗ್ರಹಿಸಿದ್ದಾರೆ.

Tags:

error: Content is protected !!