BALLARI

ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿದ್ದ ಮತ್ತೊಂದು ಭ್ರೂಣ ಯಶಸ್ವಿ ತೆರವು!

Share

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಲೋಕವೇ ಬೆರಗಾಗುವಂತಹ ಅಪರೂಪದ ಶಸ್ತ್ರಚಿಕಿತ್ಸೆಯೊಂದು ಯಶಸ್ವಿಯಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ದಾಖಲಾಗಿದ್ದ ಕೇವಲ ಎರಡು ತಿಂಗಳ ಹಸುಗೂಸಿನ ಹೊಟ್ಟೆಯಲ್ಲಿದ್ದ ಮತ್ತೊಂದು ಭ್ರೂಣವನ್ನು ವೈದ್ಯರು ಸಫಲವಾಗಿ ಹೊರತೆಗೆದು ಮಗುವಿಗೆ ಮರುಜನ್ಮ ನೀಡಿದ್ದಾರೆ.

ಬಳ್ಳಾರಿಯ ವಿಮ್ಸ್ (BMERC) ಆಸ್ಪತ್ರೆಯಲ್ಲಿ ವೈದ್ಯರು ಅತ್ಯಂತ ಅಪರೂಪದ ಹಾಗೂ ವಿಚಿತ್ರವೆನಿಸಿದ ‘ಫೀಟಸ್ ಇನ್ ಫೀಟೂ’ (Fetus in Fetu) ಪ್ರಕರಣವೊಂದರಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನ ಖಾಸಗಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್‌ಗೆ ಮಗುವನ್ನು ರೆಫರ್ ಮಾಡಲಾಗಿತ್ತು. ವೈದ್ಯಕೀಯ ವಿಜ್ಞಾನದ ಪ್ರಕಾರ ತಾಯಿ ಗರ್ಭದಲ್ಲಿ ಅವಳಿ ಭ್ರೂಣ ರೂಪುಗೊಳ್ಳುವ ಸಂದರ್ಭದಲ್ಲಿ, ಒಂದು ಭ್ರೂಣ ಮತ್ತೊಂದು ಮಗುವಿನ ದೇಹದೊಳಗೆ ಸೇರಿಕೊಂಡಿರುವುದು ತಪಾಸಣೆಯಿಂದ ತಿಳಿದುಬಂದಿತ್ತು. ಜನಿಸಿದ ಸುಮಾರು 5 ಲಕ್ಷ ಮಕ್ಕಳಲ್ಲಿ ಕೇವಲ ಒಬ್ಬರಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ವಿರಳವಾದ ಪ್ರಕರಣದಲ್ಲಿ, ವಿಮ್ಸ್‌ನ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಡಾ. ಗಡ್ಡಿ ದಿವಾಕರ್ ನೇತೃತ್ವದ ವೈದ್ಯರ ತಂಡವು ಅತ್ಯಂತ ಜಾಗರೂಕತೆಯಿಂದ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.

Tags:

error: Content is protected !!