Ballari

ಬಳ್ಳಾರಿಯಲ್ಲಿ ‘ಟಾಕ್ಸಿಕ್’ ಹವಾ: ಮುಂಗಡ ಟಿಕೆಟ್ ಎಲ್ಲಾ ಸೋಲ್ಡ್ ಔಟ್, ಫ್ಯಾನ್ಸ್ ಸಂಭ್ರಮ!

Share

ಬಳ್ಳಾರಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ತಂದಿರುವ ಹವಾ ಎಂಥದ್ದು ಅಂತ! ಚಿತ್ರಮಂದಿರಗಳ ಮುಂದೆ ಅಭಿಮಾನಿಗಳ ಸುಡು ಬಿಸಿಲಿನಲ್ಲೂ ಟಿಕೆಟ್ಗಾಗಿ ಮುಗಿಬಿದ್ದಿರೋ ದೃಶ್ಯವೇ ಈ ಸಿನಿಮಾದ ಬ್ರಹ್ಮಾಂಡ ಯಶಸ್ಸಿಗೆ ಸಾಕ್ಷಿಯಾಗಿದೆ.

ಬಳ್ಳಾರಿ ನಗರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಅಬ್ಬರ ಜೋರಾಗಿದ್ದು, ಬಿಡುಗಡೆಗೂ ಮುನ್ನವೇ ಸಿನಿಪ್ರೇಮಿಗಳಲ್ಲಿ ಭಾರೀ ಕ್ರೇಜ್ ಸೃಷ್ಟಿಯಾಗಿದೆ. ನಗರದ ಪ್ರಮುಖ ಐದು ಚಿತ್ರಮಂದಿರಗಳ ಮೊದಲ ಎರಡು ಶೋಗಳ ಎಲ್ಲಾ ಟಿಕೆಟ್‌ಗಳು ಸಂಪೂರ್ಣ ಸೋಲ್ಡ್ ಔಟ್ ಆಗಿವೆ. ಅದರಲ್ಲೂ ಐತಿಹಾಸಿಕ ನಟರಾಜ್ ಚಿತ್ರಮಂದಿರವು ‘ಫುಲ್ ಹೌಸ್’ ಪ್ರದರ್ಶನದೊಂದಿಗೆ ಭರ್ಜರಿ ಸದ್ದು ಮಾಡುತ್ತಿದೆ. ಪರದೆ ಮೇಲೆ ಯಶ್ ಅವರ ಝಲಕ್ ಕಾಣಿಸುತ್ತಿದ್ದಂತೆ ಚಿತ್ರಮಂದಿರದ ಒಳಗೆ ಸೇರಿದ್ದ ಅಭಿಮಾನಿಗಳು ಸಿಳ್ಳೆ, ಚಪ್ಪಾಳೆ ತಟ್ಟಿ ಕುಣಿದು ಕುಪ್ಪಳಿಸುವ ಮೂಲಕ ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಮುಗಿಲು ಮುಟ್ಟುವಂತೆ ಆಚರಿಸುತ್ತಿದ್ದಾರೆ.

Tags:

error: Content is protected !!