ಒಬ್ಬ ಮನುಷ್ಯ ಪರಿವರ್ತೆನೆಗೆ ಶ್ರೀ ಮಹರ್ಷಿ ವಾಲ್ಮೀಕಿ ಯವರೆ ನಿದರ್ಶನವಾಗಿದ್ದಾರೆ ಎಂದು ಹುಕ್ಕೇರಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ಹೇಳಿದರು.

ಹುಕ್ಕೇರಿ ತಾಲೂಕಾ ಆಡಳಿತ, ತಾಲೂಕು ಪಂಚಾಯತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಹಾಗೂ ಪುರಸಭೆಗಳ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಯವರ ಜಯಂತಿ ಸಮಾರಂಭ ಜರುಗಿತು.
ಪಟ್ಟಣ ಡಾ, ಬಾಬು ಜಗಜೀವನರಾಮ್ ಭವನದಲ್ಲಿ ಜರುಗಿದ ಜರುಗಿದ ಸಮಾರಂಭವನ್ನು ಹುಲ್ಲೊಳಿ ಹಟ್ಟಿಯ ಶಿವಾನಂದ ಮಠದ ಅಭಿನವ ಮಂಜುನಾಥ ದೇವರ ದಿವ್ಯ ಸಾನಿಧ್ಯದಲ್ಲಿ ವಾಲ್ಮೀಕಿ ಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ವೇದಿಕೆ ಮೇಲೆ ಗ್ರೇಡ್ ೨ ತಹಸಿಲ್ದಾರ ಪ್ರಕಾಶ ಕಲ್ಲೋಳಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಾಮ ನಿದರ್ಶನ ಸದಸ್ಯ ಕರೆಪ್ಪ ಗುಡೆನ್ನವರ, ರಮೇಶ ಹುಂಜಿ, ಗ್ಯಾರಂಟಿ ಯೋಜನೆಗಳ ತಾಲೂಕಾ ಅದ್ಯಕ್ಷ ಶಾನೂಲ ತಹಸಿಲ್ದಾರ, ಸಮಾಜ ಮುಖಂಡರಾದ ಎಚ್ ಎಲ್ ಪೂಜೇರಿ, ಭೀಮಪ್ಪ ರಾಮಗೋನಟ್ಟಿ,
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ, ಎ ಎಸ್ ಪದ್ಮನ್ನವರ, ಮಹಾದೇವ ಪಟಗುಂದಿ ಉಪಸ್ಥಿತರಿದ್ದರು.
ಬೆಳಗಿನ ಜಾವ ಕೋರ್ಟ ಸರ್ಕಲ್ ಬಳಿ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಜರುಗಿಸಿ ವಾಲ್ಮೀಕಿ ಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮೇರವಣೆಗೆ ಮೂಲಕ ವಾದ್ಯ ಮೇಳಗಳೊಂದಿಗೆ ಮುಖ್ಯ ಸಭಾ ವೇದಿಕೆ ಬರಮಾಡಿ ಕೋಳ್ಳಲಾಯಿತು.
ಮಾದ್ಯಮಗಳೊಂದಿಗೆ ಮಾತನಾಡಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಹೇಶ ಭಜಂತ್ರಿ ಮಹರ್ಷಿ ವಾಲ್ಮೀಕಿ ಯವರ ಜಯಂತಿ ಅಂಗವಾಗಿ ಇಂದು ಹುಕ್ಕೇರಿ ತಾಲೂಕಿನ ವಿವಿಧ ಇಲಾಖೆಗಳ ಸಹಕಾರದಿಂದ ಮತ್ತು ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು

ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ಮಾತನಾಡಿ ಒಬ್ಬ ಬೇಟೆಗಾರ ಸಪ್ತ ಖುಷಿಗಳ
ಭೇಟಿಯಿಂದ ಪರಿವರ್ತನೆಯಾಗಿ ರಾಮಾಯಣ ರಚಿಸಿದ ಮಹಾನ್ ವಾಲ್ಮೀಕಿ ಯವರ ಆದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದರು
ಸಮಾಜದ ಮುಖಂಡ ಆದಂದ ಪಾಟೀಲ ಮಾತನಾಡಿ ವಾಲ್ಮೀಕಿ ಯವರ ಆದರ್ಶಗಳು ನಮಗೆ ಮಾದರಿಯಾಗಿವೆ ಅವುಗಳನ್ನು ನಮ್ಮ ಜಿವನದಲ್ಲಿ ಅಳವಡಿಸಿಕೋಳ್ಳ ಬೇಕು ಎಂದರು
ಈ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳಾದ
ಬಿ ಎಸ್ ಅಂಗಡಿ, ಸ್ಪೂರ್ತಿ ಬಾಗೆವಾಡಿ, ಉಮೇಶ ಕೂಗೆ, ಗುರುಪಾದ ಸಾಲಿಮನಿ, ಮುಖ್ಯಾಧಿಕಾರಿ ಈಶ್ವರ ಶಿದ್ನಾಳ, ಲೋಕೋಪಯೋಗಿ ಇಲಾಖೆ ಅಭಿಯಂತರ ಪ್ರವೀಣ ಮಾಡಿಹಾಳ, ಕೃಷಿ ಇಲಾಖೆ ಅಧಿಕಾರಿಗಳು ಮಹಾದೇವ ಪಟಗುಂದಿ, ರ್ತಟಗಾರಿಕಾ ಇಲಾಖೆ ಮಾರುತಿ ಕಳ್ಳಿಮನಿ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
