hubbali

ಲಾರಿ ಚಾಲಕನ ಎಡವಟ್ಟು; ಮಹಿಳೆ ಸಾವು, ಕುಟುಂಬ ಜೀವನ್ಮರಣ ಹೋರಾಟ

Share

ಲಾರಿ ಚಾಲಕನ ಎಡವಟ್ಟಿನಿಂದ ಕಾರ್‌ಲ್ಲಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅಷ್ಟೇ ಅಲ್ಲೇ ಇಡೀ ಕುಟುಂಬ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಕೆಂಪಕೆರೆ ಐಸ್ ಫ್ಯಾಕ್ಟರಿ ಬಳಿ ಲಾರಿ ಚಾಲಕ ಹಿಂದೆ ನೋಡದೆ ರಿವರ್ಸ್ ತೆಗೆದುಕೊಂಡಿದ್ದಾನೆ. ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾ‌ರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಂಚಟಗೇರಿ ಮೂಲದ ರೇಣುಕಾ ಚಂದ್ರಪ್ಪ ರೆಡ್ಡರ್ ಮೃತಪಟ್ಟಿದ್ದಾರೆ. ಇನ್ನುಳಿದ ಶರಣು ಚಂದ್ರಪ್ಪ ರೆಡ್ಡರ, ಪೂಜಾ ಪ್ರವೀಣ ಬಿಡ್ನಾಳ, ಕಾರು ಚಾಲಕ ಸುಹಾಸ್ ಎಂದು ಹೇಳಲಾಗಿದ್ದ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಈ ಘಟನೆಯಿಂದ ಸ್ಥಳೀಯರು ರಸ್ತೆ ತಡೆ ಹೋರಾಟ ಮಾಡಿದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್‌ ಕಮಿಷನ‌ರ್ ಭೂಷಣ್‌ ಬೋರಸೆ ಅವರು ರಸ್ತೆಯ ಸುರಕ್ಷತೆ ಕುರಿತು ಕ್ರಮದ ಭರವಸೆ ನೀಡಿದರು.

Tags:

error: Content is protected !!