Chikkodi

ಚಿಕ್ಕೋಡಿ: ಬೈಕ್ ಕಳ್ಳರ ಬಂಧನ,— ₹3.70 ಲಕ್ಷ ಮೌಲ್ಯದ 7 ಬೈಕ್‌ಗಳು ವಶ

Share

ಕರೋಶಿ ಗ್ರಾಮದಲ್ಲಿ ನಡೆದಿದ್ದ ಮೋಟಾರ್ ಸೈಕಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಚಿಕ್ಕೋಡಿ ಪೊಲೀಸರು, ಕಳ್ಳರನ್ನು ಬಂಧಿಸಿ ಅವರಿಂದ ಒಟ್ಟು 3.70 ಲಕ್ಷ ರೂಪಾಯಿ ಮೌಲ್ಯದ 7 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕರೋಶಿ ಗ್ರಾಮದ ಶ್ರೀಮತಿ ರೇಣುಕಾ ರಮೇಶ ವಡ್ರಾಳೆ ಎಂಬುವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ₹75,000 ಮೌಲ್ಯದ ‘ಹೋಂಡಾ ಡ್ರೀಮ್ ಡಿಎಲ್‌ಎಕ್ಸ್’ (KA-23-EH-5916) ಬೈಕ್ ದಿನಾಂಕ 12/07/2026ರ ರಾತ್ರಿಯಿಂದ 13/07/2026ರ ಬೆಳಗಿನ ಜಾವದ ನಡುವೆ ಕಳುವಾಗಿದ್ದಾಗಿ ಆಗಸ್ಟ್ 8, 2026 ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 278/2026, ಕಲಂ 303(2) ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಳಗಾವಿ ಎಸ್‌ಪಿ ಶ್ರೀ ಕೆ. ರಾಮರಾಜನ್ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್‌ಪಿ ಶ್ರೀ ಆರ್. ಬಿ. ಬಸರಗಿ, ಚಿಕ್ಕೋಡಿ ಡಿಎಸ್‌ಪಿ ಗೋಪಾಲಕೃಷ್ಣ ಗೌಡ ಹಾಗೂ ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗಲೆ ಅವರ ನೇತೃತ್ವದಲ್ಲಿ ಚಿಕ್ಕೋಡಿ ಪಿಎಸ್‌ಐ ಶಿವಕುಮಾರ ಬಾರಾದಾರ ಅವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ದಿನಾಂಕ 09/10/2026 ರಂದು ಕಾರ್ಯಾಚರಣೆ ನಡೆಸಿದ ತನಿಖಾ ತಂಡವು ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದೆ. ಬಂಧಿತರಿಂದ ಚಿಕ್ಕೋಡಿ, ಅಂಕಲಿ, ಮಹಾರಾಷ್ಟ್ರದ ಸಾಂಗ್ಲಿ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಬೋರಗಾಂವ್ ವ್ಯಾಪ್ತಿಯಲ್ಲಿ ಕಳುವಾಗಿದ್ದ ಒಟ್ಟು 7 ಮೋಟಾರ್ ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಹೋಂಡಾ ಡ್ರೀಮ್ ಡಿಎಲ್‌ಎಕ್ಸ್ (KA-23-EH-5916) – ಮೌಲ್ಯ: ₹75,000/-,ಸುಜುಕಿ ಆಕ್ಸೆಸ್ 125 (KA-23-HJ-2838) – ಮೌಲ್ಯ: ₹80,000/- ,ಸುಜುಕಿ ಆಕ್ಸೆಸ್ (MH-14-KC-3492) – ಮೌಲ್ಯ: ₹35,000/- ,ಸ್ಕೂಟರ್ (MH-09-FR-9161) – ಮೌಲ್ಯ: ₹40,000/-,ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ (MH-10-MA-2382) – ಮೌಲ್ಯ: ₹10,000/-,
ಸುಜುಕಿ ಆಕ್ಸೆಸ್ 125 (KA-23-HJ-4554) – ಮೌಲ್ಯ: ₹90,000/-,ಬಜಾಜ್ ಪ್ಲಾಟಿನಾ (KA-23-HQ-5924) – ಮೌಲ್ಯ: ₹40,000/- ವಶಪಡಿಸಿಕೊಳ್ಳಲಾಗಿದೆ.

ಕಳ್ಳರನ್ನು ಬಂಧಿಸಿ ಕಳವು ಮಾಲನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗಲೆ, ಪಿಎಸ್‌ಐ ಶಿವಕುಮಾರ ಬಾರಾದಾರ ಹಾಗೂ ಸಿಬ್ಬಂದಿಗಳಾದ ಎಸ್.ಆರ್. ಭಾಗಾಯಿ, ಗಜಾನನ ಎನ್. ಕಾಂಬಳೆ, ಎಸ್.ಪಿ. ಗಲಗಲಿ, ರಾಮು ಜಿ. ಕುಳಿಗೋಡ, ವಿಜಯಕುಮಾರ ಬಿ. ಪಾಟೀಲ, ಹಣಮಂತಪ್ಪ ಕೆ. ಮತ್ತು ತಾಂತ್ರಿಕ ವಿಭಾಗದ ವಿನೋದ ಠಕ್ಕನ್ನವರ ಅವರ ಕಾರ್ಯವನ್ನು ಬೆಳಗಾವಿ ಜಿಲ್ಲಾ ಎಸ್‌ಪಿ ಅವರು ಶ್ಲಾಘಿಸಿದ್ದಾರೆ.

Tags:

error: Content is protected !!