ದೇಶದಲ್ಲಿ ಯೋಗದ ಹೋರಾಟವಾದರೆ ಮಾತ್ರ ಭಾರತ ದೇಶ ಯೋಗ ರಾಷ್ಟ್ರ ವಾಗಲು ಸಾಧ್ಯ ಎಂದು ಪತಂಜಲಿ ಯೋಗ ಸಮಿತಿ ಅಂತರಾಷ್ಟ್ರೀಯ ಯೋಗ ಗುರು ಕರ್ನಾಟಕ ಪ್ರಭಾರಿ ಭವರಲಾಲ್ ಆರ್ಯ ಹೇಳಿದರು.


ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ವಿಶ್ವ ರಾಜ ಕಾಲನಿಯಲ್ಲಿ ಯೋಗ ಗುರು ಬಾಳಕೃಷ್ಣ ಕೋಳೆಕರ ನೇತೃತ್ವದಲ್ಲಿ ಅಕ್ಟೋಬರ್ 27 ರಿಂದ ಪ್ರಾರಂಭವಾದ ಅಡ್ವಾನ್ಸ್ಡ್ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಯೋಗ ಗುರು ಭವರಲಾಲ್ ಆರ್ಯ ತುಳಸಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ನಂತರ ಯೋಗ ಶಿಬಿರ ಪರೀಕ್ಷೆ ಯಲ್ಲಿ ತೆರ್ಗಡೆಯಾದ ಯೋಗ ಸಾಧಕರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ವೇದಿಕೆ ಮೇಲೆ ಬಾಳಕೃಷ್ಣ ಕೋಳೆಕರ, ಸಂಜಯ ಕುಸ್ತಿಗಾರ, ಸಂಬಾಜಿ ನಿಂಬಾಳಕರ, ಬಸವರಾಜ ನಾಗರಾಳೆ, ಸಂದೀಪ ಸೂರ್ಯವಂಶಿ, ಕುಮಾರ ಬಡಿಗೇರ ಉಪಸ್ಥಿತರಿದ್ದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಭವರಲಾಲ್ ಆರ್ಯ ದೇಶದಲ್ಲಿ ರಾಮದೇವ ಬಾಬಾ ರವರ ನೇತೃತ್ವದಲ್ಲಿ ಆರಂಭವಾದ ಯೋಗದಲ್ಲಿ ಕೇವಲ ಶೇಕಡಾ 1 ರಷ್ಟು ಮಾತ್ರ ಜನ ಪಾಲ್ಗೊಳ್ಳುತ್ತಿದ್ದಾರೆ, ಇನ್ನೂ ಹೇಚ್ಚಿನ ಜನ ಯೋಗದಲ್ಲಿ ಭಾಗವಹಿಸಿ ಇಡಿ ರಾಷ್ಟ್ರವನ್ನು ರೋಗ ಮುಕ್ತ ಮಾಡಿ ಸ್ವಸ್ತ ರಾಷ್ಟ್ರ ಮಾಡಬೇಕಾಗಿದೆ ಕಾರಣ ಪ್ರತಿ ನಗರ,ತಾಲೂಕು ,ಹೂಬಳಿ ,ಪ್ರತಿ ವಾರ್ಡ ಗಳಲ್ಲಿ ಯೋಗ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶದಿಂದ ಇಂದು ಹುಕ್ಕೇರಿ ನಗರದಲ್ಲಿ ಬಾಳಕೃಷ್ಣ ಕೋಳೆಕರ ನೇತೃತ್ವದಲ್ಲಿ ಅಡ್ವಾನ್ಸ್ಡ್ ಯೋಗ ತರಬೇತಿ ಶಿಬಿರ ಹಮ್ಮಿಕೋಳ್ಳಲಾಗಿದೆ ಎಂದರು
ಬೆಳಗಿನ ಜಾವ ಮಹಿಳೆಯರು ಯೋಗ ಗುರುಗಳಿಗೆ ಆರತಿ ಮಾಡುವ ಮೂಲಕ ಬರಮಾಡಿಕೊಂಡರು, ಕಾಲನಿ ಆವರಣದಲ್ಲಿ ಸಸಿ ನೆಟ್ಟು ಸಾಮೂಹಿಕ ಯೋಗಾಭ್ಯಾಸ ಜರುಗಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವರಾಜ ಕಾಲನಿ ಯೋಗ ಸಮಿತಿ ಸದಸ್ಯರಾದ
ಉದಯ ಮಗದುಮ್ಮ, ಉದಯಕುಮಾರ ಭಾಯನಾಯಕ, ರವಿಂದ್ರ ದಡ್ಡಿಮನಿ, ದೇವಯ್ಯಾ ಮಠದ,ಸಾಗರ ಒಂದೂರೆ, ಪ್ರವೀಣ ಹಾಗೂ ಘಟಪ್ರಭಾ,ಸಂಕೇಶ್ವರ, ಹುಕ್ಕೇರಿ, ಗೋಕಾಕ ಯೋಗ ಗುರುಗಳು, ಯೋಗ ಸಾಧಕರು , ಮಹಿಳೆಯರು ಹೇಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

