Hukkeri

ಹುಕ್ಕೇರಿ : ಅವರಗೋಳ ಗ್ರಾಮಕ್ಕೆ ಹೆಚ್ಚುವರಿ ಪಡಿತರ ವಿತರಣೆ ಕೇಂದ್ರ ಪ್ರಾರಂಬಿಸಲು ಗ್ರಾಮಸ್ಥರಿಂದ ಮನವಿ.

Share

ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮಕ್ಕೆ ಹೇಚ್ಚುವರಿಯಾಗಿ ಪಡಿತರ ವಿತರಣೆ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ತಹಸಿಲ್ದಾರ ಮುಖಾಂತರ ಮನವಿ ಸಲ್ಲಿಸಿದರು.

ಮನವಿದಾರ ಆನಂದ ಖಾತೆದಾರ ಮಾತನಾಡಿ ಅವರಗೋಳ ಗ್ರಾಮದಲ್ಲಿ ಒಂದೆ ಪಡಿತರ ಕೇಂದ್ರ ದಿಂದ ಸುಮಾರು 13 ನೂರು ಜನರಿಗೆ ಆಹಾರ ಧಾನ್ಯ ವಿತರಿಸುವಲ್ಲಿ ವಿಳಂವಾಗುತ್ತಿದ್ದು ಹಾಗೂ ತೋಟ ಪಟ್ಟಿಗಳಲ್ಲಿ ವಾಸಿಸುವ ಜನರು ತಮ್ಮ ಕೇಲಸಗಳನ್ನು ಬದಿಗೋಟ್ಟಿ ಪಡಿತರ ಪಡೆಯುವಲ್ಲಿ ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವದರಿಂದ ಜನರಿಗೆ ತುಂಬಾ ತೊಂದರೆ ಯಾಗುತ್ತಿದೆ ಕಾರಣ ಗ್ರಾಮದಲ್ಲಿ ಜನಪರ ಕಾರ್ಯಗಳನ್ನು ಮಾಡುತ್ತಿರುವ ಶ್ರೀ ಪಡೆಮ್ಮಾದೇವಿ ಕುರಿ ಸಂಗೋಪನಾ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಮುಖಾಂತರ ಹೆಚ್ಚುವರಿಯಾಗಿ ಪಡಿತರ ಕೇಂದ್ರ ಸ್ಥಾಪಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು

ತಹಸಿಲ್ದಾರ ಬಲರಾಮ ಕಟ್ಟಿಮನಿ ಮಾತನಾಡಿ ಈ ಕುರಿತು ಪರಿಶೀಲನೆ ಮಾಡಿ ಸೂಕ್ತ ಕ್ರಮ ಜರುಗಿಸಲಾಗುವದು ಎಂದರು
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಅಬ್ದುಲ ಕಿಲ್ಲೆದಾರ, ಚಿದಾನಂದ ಹಿರೇಕೆಂಚನವರ, ಆನಂದ ಕೌಲಾಪುರೆ, ಶಂಕರಯ್ಯಾ ಹಿರೇಮಠ, ಸಿದಲಿಂಗ ಕುರಬರ, ಬಾಳಪ್ಪಾ ಸನದಿ, ಬಾಹುಸಾಹೇಬ ಪಾಂಡ್ರೆ, ಸುರೇಶ ಖಾತೇದಾರ, ವಿಶ್ವನಾಥ ಸನದಿ, ಕೆಂಪಣ್ಣಾ ಅಂಕಲಿ,ಅರುಣ ಓಂಕಾರ ಮೊದಪಾದವರು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!