bellari

ಸಾವಿನಲ್ಲೂ ಸಾರ್ಥಕತೆ ಮೆರೆದ ಆಂಬುಲೆನ್ಸ್ ಚಾಲಕ; ಅಂಧರಿಗೆ ಕಣ್ಣುಗಳ ದಾನ!

Share

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಗನ ಅಕಾಲಿಕ ಸಾವಿನ ತೀವ್ರ ದುಃಖದ ನಡುವೆಯೂ ಕುಟುಂಬವೊಂದು ಅತ್ಯಂತ ಮಾನವೀಯ ಕಾರ್ಯ ಮಾಡುವ ಮೂಲಕ ಮಾದರಿಯಾಗಿದೆ. ನೂರಾರು ರೋಗಿಗಳಿಗೆ ಸೇವೆ ಸಲ್ಲಿಸಿದ್ದ ಆಂಬುಲೆನ್ಸ್ ಚಾಲಕ ರಾಮ್ ಬಾಬು ಅವರ ನಿಧನದ ನಂತರ, ಅವರ ಕುಟುಂಬಸ್ಥರು ನೇತ್ರದಾನ ಮಾಡುವ ಮೂಲಕ ಇಬ್ಬರು ಅಂಧರ ಬಾಳಿಗೆ ಹೊಸ ಬೆಳಕಾಗಿದ್ದಾರೆ.

ನಿವೃತ್ತ ಆಂಬುಲೆನ್ಸ್ ಚಾಲಕ ಬಾಬುರಾವ್ ಅವರ ಪುತ್ರ, 44 ವರ್ಷದ ಆಂಬುಲೆನ್ಸ್ ಚಾಲಕ ರಾಮ್ ಬಾಬು ಅವರು ಅಕಾಲಿಕವಾಗಿ ಕೊನೆಯುಸಿರೆಳೆದರು. ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬಸ್ಥರು, ಅವರ ನೇತ್ರಗಳನ್ನು ದಾನ ಮಾಡಲು ನಿರ್ಧರಿಸಿದರು. ಭಗತ್ ಸಿಂಗ್ ರಕ್ತದಾನಿಗಳ ಸಂಘದ ಕೆ.ಎಂ. ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ರಾಮ್ ಬಾಬು ಅವರ ನಿವಾಸದ ಮುಂಭಾಗದಲ್ಲೇ ನೇತ್ರ ಸಂಗ್ರಹ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಸಂಗ್ರಹಿಸಿದ ಕಣ್ಣುಗಳನ್ನು ಬಳ್ಳಾರಿಯ ವಿಮ್ಸ್ ನೇತ್ರ ಬ್ಯಾಂಕ್‌ಗೆ ಹಸ್ತಾಂತರಿಸಲಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದ ಈ ಕುಟುಂಬದ ಮಾನವೀಯ ನಿರ್ಧಾರವನ್ನು ಹೊಸಪೇಟೆಯ ನಾಗರಿಕರು ಮತ್ತು ವಿವಿಧ ಸಂಘ-ಸಂಸ್ಥೆಗಳು ಮುಕ್ತಕಂಠದಿಂದ ಶ್ಲಾಘಿಸಿವೆ.

Tags:

error: Content is protected !!