Hukkeri

ಹುಕ್ಕೇರಿ : ನೂತನ ಸಭಾಂಗಣದಲ್ಲಿ ಹುಕ್ಕೇರಿ ದಸರಾ ಉತ್ಸವ ಅದ್ದೂರಿ ಆರಂಭ.

Share

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ದಸರಾ ಉತ್ಸವ ನೂತನ ಸಭಾಂಗಣದಲ್ಲಿ ಕಟಕೋಳ ಎಂ ಚಂದರಗಿಯ ವೀರಭದ್ರೇಶ್ವರ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.


ಬೆಳಗಿನ ಜಾವ ಚಂಡಿಕಾ ಹೋಮದಲ್ಲಿ ಪಾಲ್ಗೊಂಡ ಚಂದ್ರಶೇಖರ ಮಹಾಸ್ವಾಮಿಗಳು ಪೂರ್ಣಹುತಿ ಜರುಗಿಸಿದರು.
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಅದ್ಯಕ್ಷ ಮಹಾವೀರ ನಿಲಜಗಿ ಕಳೆದ 35 ವರ್ಷಗಳಿಂದ ಉತ್ತರ ಕರ್ನಾಟಕದ ಹುಕ್ಕೇರಿ ಹಿರೇಮಠದ ದಸರಾ ಉತ್ಸವವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿಗೆ ಪ್ರಶಸ್ತಿ ಮತ್ತು ಗೌರವ ಸಮರ್ಪಣೆ ಮಾಡುವ ಮೂಲಕ ಆಚರಿಸಲಾಗುತ್ತಿದೆ ಎಂದರು
ವೇದಿಕೆ ಮೇಲೆ ರೇಣುಕ ಗಡದೇಶ್ವರ ದೇವರು, ಸಿದ್ದನಗೌಡಾ ಗೌಡರ,ಸುನಿತಾ ನಿಂಬರಗಿ, ಎ ಕೆ ಪಾಟೀಲ, ಸುಭಾಷ ನಾಯಿಕ,ಬಸವರಾಜ ಹಳಂಗಳಿ, ಕಲ್ಲಪ್ಪಾ ಗಾಣಿಗೇರ,ಶ್ರೀಶೈಲ ಮಠದ, ಸುರೇಶ ಜಿನರಾಳೆ ಉಪಸ್ಥಿತರಿದ್ದರು.

ಚಂದ್ರಶೇಖರ ಮಹಾಸ್ವಾಮಿಗಳು ಶ್ರೀಗಳನ್ನು ಮತ್ತು ಗಣ್ಯರನ್ನು ಸತ್ಕರಿಸಿ ಮಾತನಾಡಿ ಹುಕ್ಕೇರಿ ಹಿರೇಮಠದಲ್ಲಿ ಹರಿ ಮತ್ತು ಹರ ಗುರುಗಳನ್ನು ಪೂಜಿಸುವ ಮೂಲಕ ಜಾತಿ ಮತ ಭೇದ ವಿಲ್ಲದೆ ಎಲ್ಲರನ್ನೂ ಗೌರವಿಸುವ ಮೂಲಕ ಸರ್ವಧರ್ಮದ ಶಾಂತಿಯ ತೋಟವಾಗಿದೆ ಎಂದರು
ಹತ್ತು ದಿನಗಳ ವರೆಗೆ ಜರಗುವ ದಸರಾ ಉತ್ಸವದಲ್ಲಿ ಭಾಗಿಯಾದ ಭಕ್ತರಿಗೆ ಹೋಳಿಗೆ ಊಟ ಸಿದ್ದಪಡಿಸುವ ಪಾಕಶಾಲೆಗೆ ಶ್ರೀಗಳು ಭೇಟಿ ನೀಡಿ ಪೂಜೆ ನೆರವೇರಿಸಿದರು.


ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಕಟಕೋಳ ಚಂದರಗಿಯ ವೀರಭದ್ರೇಶ್ವರ ಮಹಾಸ್ವಾಮಿಗಳು ಸನಾತನ ಕಾಲದಿಂದ ಪ್ರಸಿದ್ದ ಹೊಂದಿದ ಹುಕ್ಕೇರಿ ದಸರಾ ಉತ್ಸವ ಈ ವರ್ಷ ನೂತನ ಸಭಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ, ಇದಕ್ಕೆ ಕಾರಣ ಚಂದ್ರಶೇಖರ ಮಹಾಸ್ವಾಮಿಗಳ ನಿರಂತರ ಶ್ರಮ ಮಠದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು
ಈ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಭಕ್ತರು ಉಪಸ್ಥಿತರಿದ್ದರು.


ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!