ಹುಕ್ಕೇರಿ ಹಿರೇಮಠ ಸoಸ್ಥಾನದ ದಸರಾ ಉತ್ಸವ ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಒಂಭತ್ತು- ಹತ್ತು ದಿನಗಳ ವರೆಗೆ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ವಿಷೇಶ ಅನುಷ್ಠಾನ ದಿಂದ ಚಂಡಿಕಾ ಯಾಗ ಗಂಗಾರತಿ ಪುರಾಣ ಪ್ರವಚನ ಸೇರಿದಂತೆ ನಿಮಗೆ ನೀವು ಇಚ್ಚಿಸಿರುವ ಕಾರ್ಯ ಪೂರ್ಣ ವಾಗಬೇಕಾದರೆ ನಿಮಗೆ ಪೂರ್ಣ ಫಲ ಸಿಗಬೇಕಾದರೆ ತಪ್ಪದೆ ದಸರಾ ಉತ್ಸವದಲ್ಲಿ ಭಾಗಿ ಆಗುವುದು ಉತ್ತಮ ಎಂದು ಶ್ರೀರಂಗಪಟ್ಟಣ ಚಂದ್ರವನ ಆಶ್ರಮ ಬೇಬಿಮಠದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳವರು ಹೇಳಿದರು.

ಹುಕ್ಕೇರಿ ಹಿರೇಮಠದ ದಸರಾ ಉತ್ಸವಕ್ಕೆ ಚಂದ್ರಶೇಖರ ಮಹಾಸ್ವಾಮಿಗಳು ಚಾಮುಂಡೇಶ್ವರಿ ಅಮ್ಮನವರಿಗೆ ವಿಷೇಶ ಪೂಜೆ ನೇರವೆರಿಸಿದರು.
ಈ ಸಂದರ್ಭದಲ್ಲಿ ಚಾಮುಂಡೇಶ್ವರಿಯ ಪ್ರದಾನ ಅರ್ಚಕ ಶಶಿಧರ ದೀಕ್ಷಿತ್ ಮತ್ತು ನಾಗರಾಜ ಮನಿಗಾರ ಉಪಸ್ಥಿತರಿದ್ದರು.
