Dharwad

ಧಾರವಾಡದಲ್ಲಿ ಬಿಜೆಪಿ ವಿರುದ್ಧ ಸಚಿವ ಸಂತೋಷ ಲಾಡ್ ವಾಗ್ದಾಳಿ

Share

ಬೋಗಸ್ ಬಿಜೆಪಿ ದೇಶಕ್ಕೆ ಏನು ಕೊಟ್ಟಿದೆ..?, ಕಾಂಗ್ರೆಸ್ ಏನು ಕೊಟ್ಟಿದೆ ಅನ್ನೋದನ್ನ ತೋರಿಸಬೇಕಿದೆ. ಸ್ಕಿಲ್ ಇಂಡಿಯಾ, ಒಂದು ಕೋಟಿ ಮೂವತ್ತು ಲಕ್ಷ ಉದ್ಯೋಗ ಕೊಡುತ್ತೇವೆ ಎಂದಿದ್ದರು, ಆದರೆ ಎಲ್ಲಿ ಉದ್ಯೋಗ ಸೃಷ್ಟಿಯಾಗಿವೆ ಎಂದು ಪ್ರಶ್ನೆ ಮಾಡುವ ಮೂಲಕ ಬಿಜೆಪಿ ವಿರುದ್ಧ ಧಾರವಾಡದಲ್ಲಿ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡದಲ್ಲಿ ಪಶ್ಚಿಮ ಪದವೀಧರ ಚುನಾವಣೆ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶದಲ್ಲಿ 95 ಲಕ್ಷ ಅಕೌಂಟ್‌ಗಳು ಪೇಕ್ ಆಗಿವೆ. ಜೋಶಿ ಅವರಿಗೆ ಗೊತ್ತಾಗಬೇಕಿದೆ. ಇಡೀ ದೇಶದಲ್ಲಿ ಯುವಕರನ್ನು ಜಾಗೃತಿ ಮಾಡಬೇಕಿದೆ. ಜೋಶಿ ಅವರಿಗೆ ಹೋಗಿ ಕೇಳಿ, 120ಕ್ಕೂ ಹೆಚ್ಚು ಪೇಪರ್ ಲೀಕ್ ಆಗಿವೆ. ದೇಶದಲ್ಲಿ 10 ಕೋಟಿ ಯುವಕರಿಗೆ ಬಿಜೆಪಿ ಅನಾನುಕೂಲ ಮಾಡಿದೆ. ಮೋದಿ ಅವರು ಅಧಿಕಾರಕ್ಕೆ ಬಂದ್ರೆ ಕ್ರಾಂತಿ ಮಾಡುತ್ತೇನೆ ಎಂದರು, ಆದರೆ ಯಾವುದರಲ್ಲಿ ಯಾವ ಕ್ರಾಂತಿ ಮಾಡಿದ್ದಾರೆ. ಇಲ್ಲಿಯವರೆಗೆ ಒಂದು ಪತ್ರಿಕಾಗೋಷ್ಠಿ ಮಾಡಿಲ್ಲ ಮೋದಿಯವರು, ಮೋದಿ ಅವರ ಸರಕಾರ 98 ಶಾಲೆಗಳನ್ನು ಮುಚ್ಚಿಹಾಕಿಸಿದ್ದಾರೆ. 21 ಸಾವಿರಷ್ಟು ಡ್ರಗ್ಸ್ ಸಿಜ್ ಆಗಿದೆ, ದೆಹಲಿಯಲ್ಲಿ 7 ಸಾವಿರದಷ್ಟು ಡ್ರಗ್ಸ್ ಸಿಜ್ ಆಗಿದೆ. ಡ್ರಗ್ ಮುಕ್ತ ಭಾರತ ಆಗಬೇಕು. ಡ್ರಗ್ಸ್ ದೇಶದಲ್ಲಿ ಬಂದಿದೆ. ನ್ಯಾಷನಲ್ ಸೆಕ್ಯೂರಿಟಿ ಕೊಟ್ಟ ಮಾಹಿತಿ ಇದು, ಡ್ರಗ್ಸ್‌ನಿಂದ ಬಂದ ಹಣವನ್ನು ಟೆರರಿಸ್ಟ್‌ಗೆ ಬಳಕೆ ಮಾಡಲಾಗುತ್ತಿದೆ. ಈ ಮಾಹಿತಿಯನ್ನು ನ್ಯಾಷನಲ್‌ ಸೆಕ್ಯೂರಿಟಿ ಹೇಳಿದೆ, ಬಿಜೆಪಿ ಅವರು ಜನರಿಗೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಕೇವಲ ಚುನಾವಣೆ ವಿಚಾರಕ್ಕೆ ಮಾತ್ರ ಧ್ವನಿ ಎತ್ತಿಲ್ಲ. ಅವರು ದೇಶದಲ್ಲಿ ಒಂದು ಆಂದೋಲನವನ್ನು ಸೃಷ್ಟಿ ಮಾಡುತ್ತಿದ್ದಾರೆ.

ಇನ್ನೂ ಎಸ್‌ಐಆರ್ ವಿಚಾರದಲ್ಲಿ ಪ್ರಜಾಪ್ರಭುತ್ವ ನಿಯಮ ಗಾಳಿಗೆ ತೂರಲಾಗಿದೆ. ಮುಖ್ಯ ಚುನಾವಣಾ ಅಧಿಕಾರಿ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ, ಅವರು ರಾಜೀನಾಮೆ ಕೊಡಬೇಕಲ್ವಾ..?. ದೇಶದ ಪ್ರಜಾ ವ್ಯವಸ್ಥೆಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ದೇಶದಲ್ಲಿ 13 ಕೋಟಿ ಮತದಾರರನ್ನು ಹೊರಗಡೆ ಇಟ್ಟಿದ್ದಾರೆ. ಸರಕಾರದ ಯಾವುದೇ ಅನುಮತಿ ಇಲ್ಲದೆ 13 ಕೋಟಿ ಮತದಾರರನ್ನು ಹೊರಗಡೆ ಇಟ್ಟಿದ್ದಾರೆ. ಫಾರ್ಮ್ ನಂಬರ್ 6ರಲ್ಲಿ ಬದಲಾವಣೆ ತರಬೇಕಾದರೆ ಎಲ್ಲಾ ಚುನಾವಣಾ ಆಯೋಗದ ಮೂರು ಸದಸ್ಯರ ಜೊತೆ ಚರ್ಚೆಸಬೇಕಿತ್ತು ಕೇಂದ್ರ ಸರಕಾರ, ಕಾನೂನಿನಲ್ಲಿ ಬದಲಾವಣೆ ತರಬೇಕು ಅನ್ನೋ ಗೆಜೆಟ್‌ನಲ್ಲಿ ಅವಕಾಶ ಇದ್ದರೆ. ಕೇಂದ್ರ ಸರಕಾರದಲ್ಲಿತ್ತು ಅದನ್ನ ದುರುಪಯೋಗಪಡಿಸಿಕೊಂಡಿದೆ. 13 ಕೋಟಿ ಮತದಾರರನ್ನು ಹೊರಗಡೆ ಇಟ್ಟಿದ್ದಾರೆ. ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರ, ಹರಿಯಾಣ, ಬಿಹಾರ, ವೆಸ್ಟ್ ಬೆಂಗಾಲ್ ಚುನಾವಣೆಗಳನ್ನು ಗೆಲ್ಲಿಸಲು ಮಾಡಿರುವ ಕುತಂತ್ರ. ಜ್ಞಾನೇಶ್ ಕುಮಾರ್ ಮಾಡಿರುವ ಕುತಂತ್ರ ಇದು ಎಂದರು. ಜೊತೆಗೆ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮಾತ್ರ ಡಿಲಿಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಸ್‌ಐಆರ್ ಆದ ತಕ್ಷಣ ಫಾರ್ಮ್ ನಂಬರ್ 7 ಬರೋದೇ ಇಲ್ಲ, ಎಸ್‌ಐಆರ್ ಮಾಡಿದ್ದು ಇವರೇ, ಮ್ಯಾಪಿಂಗ್ ಮಾಡೋದು ಇವರೇ. ಎಸ್‌ಐಆರ್ ಆದ ಮೇಲೆ ಫಾರ್ಮ್ ನಂಬರ್ 7 ಯಾಕೆ ಎಂದು ಲಾಡ್ ಪ್ರಶ್ನೆ ಮಾಡಿದರು.

ಬೈಟ್: ಸಚಿವ ಸಂತೋಷ ಲಾಡ್.

Tags:

error: Content is protected !!