ಇನ್ಸ್ಟಾಗ್ರಾಮ್ ದಲ್ಲಿ ಸ್ಟೋರಿ ಹಾಕಿದ್ದಕ್ಕೆ ಯುವಕನನ್ನು ಕೆಲವೊಂದು ಗ್ಯಾಂಗ್ ಕಿಡ್ನಾಪ್ ಮಾಡಿ, ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ ಪೊಲೀಸರು ಮೂವರು ಅಪ್ರಾಪ್ತರು ಸೇರಿ ಆರು ಜನರನ್ನ ಅರೆಸ್ಟ್ ಮಾಡಿದ್ದಾರೆ.


ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ ಸ್ಟೇಟಸ್ ವಿಚಾರವಾಗಿ, ಆನಂದ ನಗರದ ಸಾಧಿಕ್ ಎಂಬ ಯುವಕನನ್ನ ಕಾರಿನಲ್ಲಿ ಕಿಟ್ರ್ಯಾಪ್ ಮಾಡಿ, ಹಲ್ಲೆ ಮಾಡಿದ್ದರು.

ಪೊಲೀಸರು ಬೆನ್ನತ್ತುತ್ತಿದ್ದಂತೆ ಆರೋಪಿಗಳು ಸಾಧಿಕ್ನನ್ನು ಬಿಟ್ಟು ಪರಾರಿಯಾಗಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್, ರಾಹುಲ್ ಹಾಗೂ ಅಮನ್ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರು ಅಪ್ರಾಪ್ತರು ಎಂದು ತಿಳಿದುಬಂದಿದೆ.

ಇನ್ಸ್ಟಾಗ್ರಾಮ್ ಸ್ಟೋರಿ ವಿಚಾರವಾಗಿ ಆರಂಭವಾದ ವಿವಾದ ಕಿಡ್ನಾಪ್ ಮತ್ತು ಹಲ್ಲೆವರೆಗೂ ತಲುಪಿದ್ದು ಪ್ರಕರಣ ಕುರಿತು ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ.
