ಕರ್ನಾಟಕದ ತಂತ್ರಜ್ಞಾನ ಸಾಮರ್ಥ್ಯವನ್ನು ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತಗೊಳಿಸದೆ, ರಾಜ್ಯದ ವಿವಿಧ ಪ್ರಾದೇಶಿಕ ಭಾಗಗಳಲ್ಲೂ ಪ್ರತಿಭೆ ಹಾಗೂ ಉದ್ಯಮಶೀಲತೆಯನ್ನು ಪೋಷಿಸುವ ಉದ್ದೇಶದಿಂದ ಹುಬ್ಬಳ್ಳಿ ಐಟಿ ಪಾರ್ಕ್ನಲ್ಲಿ ರೂ. 5.80 ಕೋಟಿ ವೆಚ್ಚದಲ್ಲಿ ನೂತನ ಜಾಗತಿಕ ತಂತ್ರಜ್ಞಾನ ಕೇಂದ್ರ (Global Technological Centre – GTC) ಸ್ಥಾಪನೆಯಾಗುತ್ತಿರುವುದು ಉತ್ತರ ಕರ್ನಾಟಕದ ಯುವಕರಿಗೆ ಮತ್ತು ಸ್ಟಾರ್ಟ್ಅಪ್ಗಳಿಗೆ ಒಂದು ದೊಡ್ಡ ವರದಾನವಾಗಲಿದೆ ಎಂದು ಕಾಂಗ್ರೆಸ್ ಮುಖಂಡ
ರಜತ್ ಉಳ್ಳಾಗಡ್ಡಿಮಠ ಹೇಳಿದ್ದಾರೆ.

ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ತಂತ್ರಜ್ಞಾನದ ಬೆಳವಣಿಗೆಯನ್ನು ಈಗ ಹುಬ್ಬಳ್ಳಿಗೂ ವಿಸ್ತರಿಸಲು ಮುಂದಾಗಿರುವ ಕರ್ನಾಟಕ ಸರ್ಕಾರದ ಈ ದೂರದೃಷ್ಟಿಯ ಕ್ರಮಕ್ಕೆ ಸ್ಥಳೀಯ ಉದ್ಯಮಿಗಳು ಮತ್ತು ಯುವಜನರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇವೆ.
ಸುಮಾರು 10,000 ಚದರ ಅಡಿ ವಿಸ್ತರಣದಲ್ಲಿ, ಬಾಡಿಗೆ ರಹಿತ ಆವರಣದಲ್ಲಿ ತಲೆ ಎತ್ತುತ್ತಿರುವ ಈ ಕೇಂದ್ರವು ಈ ಭಾಗದ ಯುವಜನರ ಉಜ್ವಲ ಕನಸುಗಳಿಗೆ ರೆಕ್ಕೆ ಮೂಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
