hubbali

ನಕಲಿ ಗಾಂಧಿಗಳನ್ನು ಸಂತೃಪ್ತಿ ಪಡಿಸಲು ಚುನಾವಣೆ ಕಚೇರಿ ಮುಂದೆ ಸಿಎಂ ಪ್ರತಿಭಟನೆ

Share

ಕರ್ನಾಟಕದಲ್ಲಿ ಬರ ಪರಿಸ್ಥಿತಿ, ರೈತರ ಸಂಕಷ್ಟ ಹಾಗೂ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕಾದ ಮುಖ್ಯಮಂತ್ರಿ ರಾಜ್ಯ ಸಚಿವ ಸಂಪುಟ ಸಭೆಯನ್ನೇ ಮುಂದೂಡಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿರುವುದು ನಿಜಕ್ಕೂ ದುರಂತವೇ ಸರಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಕಲಿ ಗಾಂಧಿಗಳನ್ನು ಓಲೈಸಲು ಇಲ್ಲದ ಎಸ್ ಐ ಆರ್ ಗುಮ್ಮವನ್ನು ಸೃಷ್ಟಿಸಿ ಜನರ ದಿಕ್ಕು ತಪ್ಪಿಸುವ ನಾಟಕವಾಡುತ್ತಿದ್ದಾರೆ. ತಮ್ಮ ಸರ್ಕಾರದ ಆಡಳಿತ ವೈಫಲ್ಯವನ್ನು ಮರೆ ಮಾಚಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ.

ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿ ಬರದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸುವ ಬದಲು ರಾಜ್ಯ ಸಚಿವ ಸಂಪುಟ ಸಭೆಯನ್ನೇ ಮುಂದೂಡಿ ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಎದುರು ಏಕಾಏಕಿ ಧರಣಿ ನಡೆಸುತ್ತಿರುವುದು ನಿಜಕ್ಕೂ ಖಂಡನೀಯ. ಹೀಗಾಗಿ ಅವರ ಮೇಲೆ ಎಫ್ ಐ ಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಚುನಾವಣಾ ಪ್ರಕ್ರಿಯೆ, ಎಸ್ಐಆರ್ ಪ್ರಕ್ರಿಯೆ, ಫಾರ್ಮ್ 7, ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಚುನಾವಣಾ ಅಧಿಕಾರಿಗಳಿಗೆ ಹಾಗೂ ಬಿಎಲ್ಎ, ಬಿಎಲ್ಓಗಳಿಗೂ ಸ್ಪಷ್ಟ ಅರಿವಿರುತ್ತದೆ ಮತ್ತು ಚುನಾವಣಾ ಆಯೋಗವೂ ಈ ಬಗ್ಗೆ ನಿರಂತರವಾಗಿ ಗಮನಹರಿಸುತ್ತಿರುತ್ತದೆ. ​ಹೀಗಿದ್ದರೂ ಡಿಕೆ ಶಿವಕುಮಾರ್‌ ಅವರು ಸಿಎಂ ಆಗಿ ಧರಣಿಯ ಹಾದಿ ತುಳಿದಿರುವುದು ಅಕ್ಷಮ್ಯ ಎಂದರು.

​ಬೆಂಗಳೂರಿನಲ್ಲಿ ಪ್ರತಿಭಟನೆಗೆ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಅವಕಾಶವಿಲ್ಲ ಎನ್ನುವ ಪೊಲೀಸರು, ಬೇರೆಯವರು ಎಲ್ಲಾದರೂ ಧರಣಿ ನಡೆಸಿದರೆ ತತ್‌ಕ್ಷಣವೇ ಕ್ರಮ ಕೈಗೊಳ್ಳುತ್ತಾರೆ. ಈಗ ಕಾನೂನು ಉಲ್ಲಂಘಿಸಿ ಧರಣಿ ಕುಳಿತವರ ಮೇಲೆ ಎಫ್‌ಐಆರ್ ದಾಖಲಿಸದೆ ಸುಮ್ಮನಿರುವುದೇಕೆ? ಕೂಡಲೇ ಸಿಎಂ ಮೇಲೂ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

ರೈತರ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಬೈದವರು ನಮ್ಮವರು. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಸಾಮಾನ್ಯ ‌ ಈಗಲೂ ನಾನು ಹೋರಾಟಗಾರರನ್ನು ಗೌರವದಿಂದ ಕರೆದು ಮಾತನಾಡಿಸುತ್ತೇನೆ. ಇದೇ ತಿಂಗಳು 12 ನೇ ತಾರೀಕು ಸಭೆ ಕರೆಯಲಾಗಿದೆ. ಎಂ ಎಸ್ ಪಿ
ಅಂದ್ರೆ (ಮಿನಿಮಮ್ ಸೆಲ್ಲಿಂಗ್ ಪ್ರೈಸ್) ಇದನ್ನು ಕೇಂದ್ರ ಸರ್ಕಾರ ಹೆಚ್ಚು ಮಾಡಿದ್ರೂ ಕೂಡ ಅದರ ಲಾಭ ರೈತರಿಗೆ ಸಿಗುವದು ಅನುಮಾನ. 2018 ರಲ್ಲಿ ಸಕ್ಕರೆ ದರ ಬಹಳ ಕಡಿಮೆ ಇತ್ತು. ಕಡಿಮೆ ದರಕ್ಕೆ ಮಾರಬಾರದೆಂದು ಆದೇಶ ಮಾಡಿದೇವು. ಮೊದಲು 29ರೂ ಇತ್ತು. ನಾವು 30 ರೂ. ಗೆ ಕಡಿಮೆ ಮಾಡಬಾರದೆಂದು ಅದೇಶ ಮಾಡಲಾಗಿದೆ. ಈ ಮದ್ಯೆ ಸಕ್ಕರೆ ದರ 70 ರೂ. ಆತು. ಈಗ 41 ರೂ. ಮಾರತಾ ಇದ್ದಾರೆ ಸಕ್ಕರೆಗೆ ಎಂ ಎಸ್ ಪಿ ಜಾಸ್ತಿ ಮಾಡಿದರೂ ರೈತರಿಗೆ ಸಕ್ಕರೆ ಕಾರ್ಖಾನೆ ಯವರು ಹೆಚ್ಚು ಹಣ ಕೊಡೊದು ಗ್ಯಾರಂಟಿ ಇಲ್ಲ. ಎಂ ಎಸ್ ಪಿ ರೈತ ಸಂಬಂಧ ಇಲ್ಲ. ಈ ಬಗ್ಗೆ ದೆಹಲಿ ಸಭೆಯಲ್ಲಿ ಚರ್ಚೆ ನಡೆಸಲಾಗುವದು. ಈ ಸಭಗೆ ಹಾಜರಾಗಲು ರಾಜ್ಯದ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದಾಗಿ ತಿಳಿಸಿದರು.

ಬೈಟ್- ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

Tags:

error: Content is protected !!