hubbali

ತಾತ್ಕಾಲಿಕವಾಗಿ ಹುಬ್ಬಳ್ಳಿಯ ಪ್ರತಿಭಟನೆ ಹಿಂಪಡೆದ ಕಬ್ಬು ಬೆಳೆಗಾರರು!!!

Share

ಐತಿಹಾಸಿಕ ಹುಬ್ಬಳ್ಳಿಯಲ್ಲಿ ಕಬ್ಬಿಗೆ ವೈಜ್ಞಾನಿಕ ಬೆಲೆ ಹಾಗೂ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಸುಮಾರು 7 ಗಂಟೆಗಳ ಕಾಲ ಉಗ್ರ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ರೈತರು ಯತ್ನಿಸಿದ ಹಿನ್ನೆಲೆಯಲ್ಲಿ, ಅಕ್ಟೋಬರ್ 10ರೊಳಗೆ ದೆಹಲಿಗೆ ನಿಯೋಗ ತೆರಳಿ ಉನ್ನತ ಮಟ್ಟದ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಹುಬ್ಬಳ್ಳಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕರ್ನಾಟಕ ಕೃಷಿಕ ಸಮಾಜದ ಮುಖಂಡರಾದ ಶಶಿಕಾಂತ ಗುರೂಜಿ, ರಾಜು ಶೆಟ್ಟಿ ಮತ್ತು ರಾಜೇಂದ್ರ ಗಡೇನವರ್ ನೇತೃತ್ವದಲ್ಲಿ ಕೃಷಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಯಿತು. ಎಂ.ಎಸ್.ಪಿ. (ಕನಿಷ್ಠ ಬೆಂಬಲ ಬೆಲೆ) ಯನ್ನು 60 ರೂ.ಗೆ ಏರಿಸಬೇಕು ಮತ್ತು ಅವೈಜ್ಞಾನಿಕವಾಗಿರುವ ಎಫ್.ಆರ್.ಪಿ. ದರವನ್ನು 300 ರೂ.ಗೆ ಹೆಚ್ಚಿಸಬೇಕೆಂದು ಆಗ್ರಹಿಸಿ, ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಮಹಾರಾಷ್ಟ್ರದ ರೈತ ಮುಖಂಡ ರಾಜು ಶೆಟ್ಟಿ ಅವರು ಮಾತನಾಡಿ, ಎಥೆನಾಲ್ ಖರೀದಿದಾರರ ದರ ಹೆಚ್ಚಳಕ್ಕಾಗಿ ದೆಹಲಿಯಲ್ಲಿ ಆಹಾರ, ಕೃಷಿ ಹಾಗೂ ಪೆಟ್ರೋಲಿಯಂ ಸಚಿವಾಲಯಗಳ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದರು. ಅಕ್ಟೋಬರ್ 10ರ ಜೈಸಿಂಗ್‌ಪುರ ಕಬ್ಬು ಪರಿಷತ್‌ಗಿಂತ ಮುನ್ನ 30-40 ಜನ ರೈತ ಮುಖಂಡರ ಶಿಷ್ಟಮಂಡಳಿಯು ದೆಹಲಿಗೆ ತೆರಳಿ ಪ್ರಸ್ತಾವನೆ ಸಲ್ಲಿಸಲಿದೆ. ಕಾರ್ಖಾನೆಗಳು ಆರಂಭವಾಗುವವರೆಗೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಸಂಪೂರ್ಣವಾಗಿ ಬಂದ್ ಇರಬೇಕು ಎಂದು ಅವರು ಸ್ಪಷ್ಟಪಡಿಸಿದರು.

ರೈತ ಮುಖಂಡ ಚೂನ್ನಪ್ಪ ಪೂಜಾರಿ ಮಾತನಾಡಿ, ಇದು ಕೇವಲ ರಾಜ್ಯದಷ್ಟೇ ಅಲ್ಲದೆ ಇಡೀ ದೇಶದ ರೈತರ ಹೋರಾಟವಾಗಿದ್ದು, ಎಂ.ಎಸ್.ಪಿ. (ಕನಿಷ್ಠ ಬೆಂಬಲ ಬೆಲೆ) ರಾಷ್ಟ್ರವ್ಯಾಪಿ ಜಾರಿಯಾಗಬೇಕು ಎಂದು ಆಗ್ರಹಿಸಿದರು. ಅಕ್ಟೋಬರ್ 10ರೊಳಗೆ ಮಹಾರಾಷ್ಟ್ರ ಮತ್ತು ಕರ್ನಾಟಕದ ರೈತ ಮುಖಂಡರೊಂದಿಗೆ ದೆಹಲಿಗೆ ತೆರಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಸಭೆ ನಡೆಸಿ ಚರ್ಚಿಸಲು ನಿರ್ಧರಿಸಲಾಗಿದೆ. ಬೇಡಿಕೆಗಳು ಈಡೇರದಿದ್ದರೆ ಮತ್ತು ರೈತರಿಗೆ ಮೋಸ ಮಾಡಿದರೆ ಮುಂದಿನ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಪ್ರಹ್ಲಾದ್ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಚೂನ್ನಪ್ಪ ಪೂಜಾರಿ ಮಾತನಾಡಿ ಇದು ಕೇವಲ ರಾಜ್ಯದ ಹೋರಾಟವಲ್ಲ, ಇದು ಇಡೀ ದೇಶದ ರೈತರ ಹೋರಾಟವಾಗಿದೆ. ಎಂ.ಎಸ್.ಪಿ. (ಕನಿಷ್ಠ ಬೆಂಬಲ ಬೆಲೆ) ವಿಚಾರವಾಗಿ ಪ್ರಹ್ಲಾದ್ ಜೋಶಿ ಅವರ ಮನೆಯ ಬಳಿ ತೆರಳಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವ ವಿಚಾರವನ್ನು ಗಟ್ಟಿಯಾಗಿ ತಂದಾಗ, ಈ ಭಾಗದಲ್ಲಿ ಚುನಾವಣೆ ನೀತಿ ಸಮಿತಿ ಇರುವುದರಿಂದ ದೆಹಲಿಗೆ ಹೋಗುವುದು ಅನಿವಾರ್ಯವಾಗಿದೆ.
ಇದಕ್ಕೆ ಕೃಷಿ ಮಂತ್ರಿಗಳು ಮತ್ತು ಪೆಟ್ರೋಲಿಯಂ ಮಂತ್ರಿಗಳು ಸ್ಪಂದಿಸಬೇಕು. ಬಹುಶಃ ಪ್ರಧಾನ ಮಂತ್ರಿಯೂ ಕೂಡ ಇದರಲ್ಲಿ ಭಾಗವಹಿಸಬೇಕಾಗುತ್ತದೆ, ಏಕೆಂದರೆ ಎಂ.ಎಸ್.ಪಿ. ಇಡೀ ದೇಶಕ್ಕೆ ಬದಲಾಗಬೇಕಿದೆ.
ಸ್ವಾಮಿನಾಥನ್ ವರದಿ ಹಾಗೂ ಜಿ. ರಾಮ್‌ಜಿ ಯೋಜನೆ ಇತ್ಯಾದಿ ಎಲ್ಲ ವಿಚಾರಗಳ ಕುರಿತು 10ನೇ ತಾರೀಕು ಒಳಗಾಗಿ ಮಹಾರಾಷ್ಟ್ರ ಮತ್ತು ನಮ್ಮ ರಾಜ್ಯದ ಸುಮಾರು 30-40 ಜನರನ್ನು ಕರೆದುಕೊಂಡು ಹೋಗಿ ಗಟ್ಟಿಯಾದ ಸಭೆಯನ್ನು ನಡೆಸಲು ಪ್ರಹ್ಲಾದ್ ಜೋಶಿ ಅವರು ದಿನಾಂಕ ನಿಗದಿಪಡಿಸಿದ್ದಾರೆ.
ರಾಜ್ಯದ ಎಲ್ಲಾ ಕಾರ್ಖಾನೆಗಳು ಹಾಗೂ ದೇಶದಾದ್ಯಂತ ಎಂ.ಎಸ್.ಪಿ. ಫಿಕ್ಸ್ ಆಗುವವರೆಗೆ ಆದೇಶ ಮೀರುವ ಕಾರ್ಖಾನೆಗಳನ್ನು ತಕ್ಷಣವೇ ಬಂದ್ ಮಾಡಿಸಬೇಕು. ಒಂದು ವೇಳೆ ಮೋಸ ಮಾಡಿದರೆ ಮುಂದಿನ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಪ್ರಹ್ಲಾದ್ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂಬ ಗಟ್ಟಿಯಾದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ರಾಜು ಶೆಟ್ಟಿ ಅವರು ಮಾತನಾಡಿ ಕರ್ನಾಟಕದ ಶಾಸಕರಾದ ಎಂ.ಆರ್. ಪಾಟೀಲ್, ಮಹೇಶ್ ಟೆಂಗಿನಕಾಯಿ, ಹಾಗೂ ಹುಬ್ಬಳ್ಳಿಯ ಜಿಲ್ಲಾಧಿಕಾರಿಗಳ ಜೊತೆ ನಡೆದ ಚರ್ಚೆಗಳ ನಂತರ, ಎಥೆನಾಲ್ ಖರೀದಿದಾರರ ದರ ಹೆಚ್ಚಳಕ್ಕಾಗಿ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.ಈ ಸಭೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ, ಕೃಷಿ ಸಚಿವಾಲಯ ಮತ್ತು ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಸಚಿವರು ಉಪಸ್ಥಿತರಿದ್ದರೆ ಮಾತ್ರ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ತಿಳಿಸಲಾಗಿದೆ. ಜೈಸಿಂಗ್‌ಪುರದಲ್ಲಿ ಅಕ್ಟೋಬರ್ 10ರಂದು ಕಬ್ಬು ಪರಿಷತ್ ನಡೆಯಲಿದ್ದು, ಅದಕ್ಕೂ ಮುನ್ನ ಮಹಾರಾಷ್ಟ್ರ ಹಾಗೂ ಕರ್ನಾಟಕದ 30 ಜನ ರೈತ ಮುಖಂಡರ ಶಿಷ್ಟಮಂಡಳಿಯು ದೆಹಲಿಗೆ ತೆರಳಿ ಎಂಎಸ್‌ಪಿ (MSP) ಹೆಚ್ಚಳ ಮತ್ತು ಎಥೆನಾಲ್ ದರ ಏರಿಕೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಿದೆ. ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ರೈತರು ಒಪ್ಪಿಗೆ ಸೂಚಿಸಿ, ಸಕ್ಕರೆ ಕಾರ್ಖಾನೆಗಳು ಆರಂಭವಾಗುವವರೆಗೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಸಂಪೂರ್ಣವಾಗಿ ಬಂದ್ ಇರಬೇಕು ಎಂದು ಎಚ್ಚರಿಕೆ ನೀಡಲಾಗಿದೆ.ರಿಕವರಿ ಕಡಿಮೆ ಇದ್ದರೂ ಕೇಂದ್ರ ಸರ್ಕಾರದ ಒತ್ತಡದಿಂದ ಸಕ್ಕರೆ ಕಾರ್ಖಾನೆಗಳನ್ನು ಬಲವಂತವಾಗಿ ಆರಂಭಿಸಲು ಮುಂದಾದರೆ, ಮಹಾರಾಷ್ಟ್ರ ಅಥವಾ ಕರ್ನಾಟಕದಲ್ಲಿ ಒಂದೇ ಒಂದು ಕಾರ್ಖಾನೆ ಆರಂಭವಾದರೂ ಸ್ವಾಭಿಮಾನಿ ಶೇತ್ಕರಿ ಸಂಘಟನೆ ಉಗ್ರ ಹೋರಾಟ ನಡೆಸಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

Tags:

error: Content is protected !!