ಯಕ್ಸಂಬಾ ಪಟ್ಟಣದ ಜೊಲ್ಲೆ ಎಜುಕೇಶನ್ ಸೊಸೈಟಿಯ ಅಂಗ ಸಂಸ್ಥೆಯಾದ ಬಸವಜ್ಯೋತಿ ಪದವಿ ಮಹಾವಿದ್ಯಾಲಯ,ಸ್ವಾಮಿ ವಿವೇಕಾನಂದ ಬಿಸಿಎ ಪದವಿ ಮಹಾವಿದ್ಯಾಲಯ ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಬಿ.ಎಸ್.ಡಬ್ಲ್ಯೂ./ಎಂ.ಎಸ್.ಡಬ್ಲ್ಯೂ. ಮಹಾವಿದ್ಯಾಲಯ, ನಣದಿ ಇವರ ಸಂಯುಕ್ತ ಆಶ್ರಯದಲ್ಲಿ “ನವಚೇತನ–2026” ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಿದ್ದು ಕಾರ್ಯಕ್ರಮವನ್ನು ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಅವರು ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ಜೊಲ್ಲೆ ಗ್ರೂಪ್ ಉಪಾಧ್ಯಕ್ಷರಾದ ಶ್ರೀ ಬಸವಪ್ರಸಾದ ಜೊಲ್ಲೆ ಮಾತನಾಡಿ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.ಜೊಲ್ಲೆ ಶಿಕ್ಷಣ ಸಂಸ್ಥೆಯಲ್ಲಿ 5700 ಕ್ಕಿಂತ ಹೆಚ್ಚು ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಹೆಮ್ಮೆಯ ವಿಷಯ.
ಕುಲಪತಿಗಳು ಸಂಸ್ಥೆಯ ಶೈಕ್ಷಣಿಕ ಸೇವೆ ಹಾಗೂ ಆಧುನಿಕ ಸೌಲಭ್ಯಗಳನ್ನು ಶ್ಲಾಘಿಸಿ, ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ, ತಂತ್ರಜ್ಞಾನ ಬಳಕೆ ಹಾಗೂ ವಿವಿಧ ಕೌಶಲ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವಿನೋದಭರಿತ ಕ್ರೀಡಾ ಹಾಗೂ ಮನರಂಜನಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಯೂನಿವರ್ಸಿಟಿ ಬ್ಲೂ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ಮತ್ತು ಆದರ್ಶ ಪ್ರಥಮ ವರ್ಷದ ವಿದ್ಯಾರ್ಥಿಗಳ ಸನ್ಮಾನ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕರಾದ ಎಂ. ಎಂ. ಪಾಟೀಲ,ಪ್ರಾಚಾರ್ಯರಾದ ಡಾ. ಎ. ಬಿ. ಅಕ್ಕೋಳೆ, ನಿಶಾ ಜಾಧವ, ಡಾ. ರವಿ ಕುರಬೇಟ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಯೋಜಕರಾದ ಎಂ. ಎಂ. ಪಾಟೀಲ ಸ್ವಾಗತಿಸಿದರು. ಉಪನ್ಯಾಸಕರಾದ ಶೃತಿ ನಾಂದನಿ ನಿರೂಪಿಸಿದರು ಹಾಗೂ ರಾಮಚಂದ್ರ ಸನದಿ ವಂದಿಸಿದರು.
“ನವಚೇತನ–2026” ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ, ಸೃಜನಶೀಲತೆ, ಕ್ರೀಡಾಸ್ಫೂರ್ತಿ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಬೆಳೆಸುವ ಉದ್ದೇಶದಿಂದ ಯಶಸ್ವಿಯಾಗಿ ನೆರವೇರಿತು.
