Chikkodi

ರೈತರನ್ನು ಭಿಕ್ಷುಕರಂತೆ ನೋಡಿದ ಸರ್ಕಾರ: ಶಶಿಕಾಂತ ಗುರೂಜಿ ಕಿಡಿ

Share

ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ತುರ್ತು ಪರಿಹಾರವಾಗಿ ₹2,500 ಜಮೆ ಮಾಡಿರುವ ವಿಚಾರಕ್ಕೆ ರೈತ ಮುಖಂಡ ಶಶಿಕಾಂತ ಗುರೂಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಸಾಲದ ಸುಳಿಯಲ್ಲಿ ಸಿಲುಕಿರುವಾಗ ಸಾಲ ಮನ್ನಾ ಮಾಡುವಂತೆ ಕೇಳಿದರೆ ಸರ್ಕಾರ ₹2,500 ಪರಿಹಾರ ನೀಡಿದೆ. ರೈತರನ್ನು ಸರ್ಕಾರ ಭಿಕ್ಷುಕರ ರೀತಿಯಲ್ಲಿ ನೋಡುತ್ತಿದೆ ಎಂದು ಶಶಿಕಾಂತ ಗುರೂಜಿ ಕಿಡಿಕಾರಿದ್ದಾರೆ. ಸರ್ಕಾರ ಜಮೆ ಮಾಡಿರುವ ₹2,500ಕ್ಕೆ ಇನ್ನೂ ₹100 ಸೇರಿಸಿ ಸರ್ಕಾರಕ್ಕೆ ಮರಳಿ ಕಳುಹಿಸುವಂತೆ ರೈತರಿಗೆ ಕರೆ ನೀಡಿದ್ದಾರೆ.

ಶಾಸಕರಿಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವೇತನ ಹಾಗೂ ಸೌಲಭ್ಯಗಳಿವೆ. ಆದರೆ ರೈತರಿಗೆ ಸಂಕಷ್ಟದ ಸಂದರ್ಭದಲ್ಲಿ ₹2,500 ನೀಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿರುವ ಅವರು, “ಡಿಕೆ ಶಿವಕುಮಾರ್ ಅವರ ಸಂಬಳವನ್ನೇ ನಾವು ಕೊಡುತ್ತೇವೆ, ರೈತರ ಸಾಲ ಮನ್ನಾ ಮಾಡಿ” ಎಂದು ಒತ್ತಾಯಿಸಿದ್ದಾರೆ.

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿರುವ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ನೀಡಬೇಕು. ಕೇವಲ ₹2,500 ಪರಿಹಾರ ನೀಡುವುದಕ್ಕಿಂತ ರೈತರ ಸಾಲ ಮನ್ನಾ ಮಾಡಿ, ಕೃಷಿ ಬದುಕಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು ಎಂದು ಶಶಿಕಾಂತ ಗುರೂಜಿ ಆಗ್ರಹಿಸಿದ್ದಾರೆ.

Tags:

error: Content is protected !!