ಮೀನು ಊಟ ಸವಿಯಲು ಸಚಿವ ಸಂಪುಟ ಸಭೆ ಕರೆದಿದ್ದಾರೆ ಎಂಬ ಯತ್ನಾಳ್ ಹೇಳಿಕೆಗೆ ಸಚಿವ ಲಕ್ಷ್ಮಣ್ ಸವದಿ ಅವರು ಕುಮಟಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ತಿರುಗೇಟು ನೀಡಿದ್ದಾರೆ. ಯತ್ನಾಳ್ ಆರೋಪ ಮಾಡಲೆಂದೇ ಇರುವುದು. ಯತ್ನಾಳ್ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ನಿರತರಾಗಿದ್ದಾರೆ. ಆದರೇ ಮೊಸರಲ್ಲಿ ಅವರಿಗೆ ಕಲ್ಲು ಸಿಗಲ್ಲ ಎಂದಿದ್ದಾರೆ.

ಮಂಗಳೂರಿನಲ್ಲಿ ಮೀನು ಊಟ ಸವಿಯಲು ಸಚಿವ ಸಂಪುಟ ಸಭೆ ಕರೆದಿದ್ದಾರೆ ಎಂಬ ಯತ್ನಾಳ್ ಹೇಳಿಕೆಗೆ ಸಚಿವ ಲಕ್ಷ್ಮಣ್ ಸವದಿ ಅವರು ಕುಮಟಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ತಿರುಗೇಟು ನೀಡಿದ್ದಾರೆ. ಯತ್ನಾಳ್ ಆರೋಪ ಮಾಡಲೆಂದೇ ಇರುವುದು. ಯತ್ನಾಳ್ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ನಿರತರಾಗಿದ್ದಾರೆ. ಆದರೇ ಮೊಸರಲ್ಲಿ ಅವರಿಗೆ ಕಲ್ಲು ಸಿಗಲ್ಲ. ಇನ್ನು ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆಯಿದ್ದು, ಹೊರಗುತ್ತಿಗೆ ಪಡೆಯಲು ಸೂಚಿಸಲಾಗಿದೆ. ಕರಾವಳಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಸಾರಿಗೆ ಸಂಸ್ಥೆಗೆ ಹೊಸ ಬಸ್ಸುಗಳನ್ನು ನೀಡಿ ಸಮಸ್ಯೆ ಪರಿಹರಿಸಲಿದ್ದೇವೆ.
ಇನ್ನು ಸಿಎಂ ಡಿ.ಕೆ.ಶಿವಕುಮಾರ ಭಗವಂತರಲ್ಲ. ಎಲ್ಲ ಕೆಲಸವನ್ನು ಒಂದೇ ಬಾರಿ ಮಾಡಲೂ ಸಾಧ್ಯವಿಲ್ಲ. ಉತ್ತರ ಕನ್ನಡದ ಆರೋಗ್ಯ ಇಲಾಖೆ ಸಮಸ್ಯೆಯನ್ನು ಹಂತ ಹಂತವಾಗಿ ಪರಿಹರಿಸುತ್ತೇವೆ. ಮಂಗಳೂರಿನ ಕ್ಯಾಬಿನೆಟ್ ಸಭೆಯಲ್ಲಿ ಕರಾವಳಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಲಾಗಿದೆ. ಎಲ್ಲ ಕಾರ್ಯಗಳನ್ನು ನಮ್ಮ ಅವಧಿಯಲ್ಲೇ ಪೂರ್ಣಗೊಳಿಸುತ್ತೇವೆ. ಸಿಎಂ ಕರಾವಳಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದಾರೆ. ಆದರೇ, ಉತ್ತರ ಕನ್ನಡ ಜಿಲ್ಲೆಯವರು ಅವರನ್ನು ಅಭಿನಂದಿಸಿಲ್ಲ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಈ ಭಾಗದ ಶಾಸಕ,ಸಚಿವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ತುಳು ಭಾಷೆಗೆ ಮಾನ್ಯ ನೀಡಿಲ್ಲ. ನಮ್ಮ ಸರ್ಕಾರ ಅದಕ್ಕೆ ಮಾನ್ಯತೆ ನೀಡಿದೆ. ಪ್ರಜಾಸೇವೆ ಇಲಾಖೆ ಮೂಲಕ ಸರ್ಕಾರ ಜನರ ಮನೆ ಬಾಗಿಲಿಗೆ ಬರಲಿದೆ. ಎಸಿ ರೂಮಿನಲ್ಲಿ ಕುಳಿತು ಕೆಲಸ ಮಾಡುವ ಬದಲೂ ಹಾಲಿ ಸಿಎಂ ಅವರು ಹೊಸ ಉಪಕ್ರಮಕ್ಕೆ ಚಾಲನೆಯನ್ನು ನೀಡಿದ್ದು, ಪ್ರತಿಯೊಬ್ಬ ಶಾಸಕರು ಈ ಆಂದೋಲನದಲ್ಲಿ ಭಾಗಿಯಾಗಿ ಸಮಸ್ಯೆಗಳಿಗೆ ಸ್ಥಳೀಯಮಟ್ಟದಲ್ಲಿ ಪರಿಹಾರ ನೀಡಲಿದ್ದಾರೆ. ಎಂದರು.
