Khanapur

ಖಾನಾಪುರ ತಾಲೂಕಿನ ತೀರ್ಥಕುಂಡೆ ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ಇಲ್ಲದೆ ರೈತರು ಮತ್ತು ಜಮೀನಿನಲ್ಲಿ ವಾಸಿಸುವ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಕಳೆದ 8 ದಿನಗಳಿಂದ ವಿದ್ಯುತ್ ಸರಬರಾಜು ಸಂಪೂರ್ಣ ಕಡಿತಗೊಂಡಿದ್ದು, ಜನ-ಜಾನುವಾರುಗಳು ಹಾಗೂ ಬೆಳೆಗಳು ಒಣಗುವ ಸ್ಥಿತಿ ತಲುಪಿದೆ. ತಕ್ಷಣವೇ ಸಮಸ್ಯೆ ಬಗೆಹರಿಯದಿದ್ದರೆ KEB ಕಚೇರಿಗೆ ಮುತ್ತಿಗೆ ಹಾಕುವುದಾಗಿ ಕಿತ್ತೂರು ಕರ್ನಾಟಕ ಸೇನೆ ಎಚ್ಚರಿಕೆ ನೀಡಿದೆ. ತೀರ್ಥಕುಂಡೆ ಗ್ರಾಮದ ಜಮೀನುಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ 24 ಗಂಟೆಗಳ ಕಾಲ ವಿದ್ಯುತ್ ಪೂರೈಸುವಂತೆ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ ನೀಡಬೇಕಾದ 7 ಗಂಟೆಗಳ ವಿದ್ಯುತ್ ಕಳೆದ 8 ದಿನಗಳಿಂದ ಬಾರದೆ ರೈತರ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಜಮೀನಿನಲ್ಲಿರುವ ಟಿಸಿ (ಟ್ರಿಪ್ಲರ್/ಟ್ರಾನ್ಸ್‌ಫಾರ್ಮರ್)ಗಳು ಕೆಟ್ಟುಹೋಗಿದ್ದರೂ ಪವರ್ ಮ್ಯಾನ್‌ಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಕಿತ್ತೂರು ಕರ್ನಾಟಕ ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ್ ಎಸ್. ಶೀಗಿಹಳ್ಳಿ ಅವರು ಖಾನಾಪುರ ತಾಲೂಕಿನ AEE ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬಾಳು ಮುತ್ಯನಟ್ಟಿ, ಮಹಾದೇವ ಕೊಡತಿ, ಸಿದ್ರಾಮ್ ಜಾಂಬೋಟಿ, ರಾಮಲಿಂಗ್ ಮೊರೆ, ಲಗಮೋಜಿ ಗವನ್ನವರ, ಮಲ್ಲಿಕಾರ್ಜುನ ಗುಣ್ಣಗೋಳ, ಉದಯ ಪಾಟೀಲ, ಪ್ರಕಾಶ್ ಮಜಗವಿ, ನಂದು ಹೊನಗೆಕರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

Share

ಖಾನಾಪುರ ತಾಲೂಕಿನ ತೀರ್ಥಕುಂಡೆ ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ಇಲ್ಲದೆ ರೈತರು ಮತ್ತು ಜಮೀನಿನಲ್ಲಿ ವಾಸಿಸುವ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಕಳೆದ 8 ದಿನಗಳಿಂದ ವಿದ್ಯುತ್ ಸರಬರಾಜು ಸಂಪೂರ್ಣ ಕಡಿತಗೊಂಡಿದ್ದು, ಜನ-ಜಾನುವಾರುಗಳು ಹಾಗೂ ಬೆಳೆಗಳು ಒಣಗುವ ಸ್ಥಿತಿ ತಲುಪಿದೆ. ತಕ್ಷಣವೇ ಸಮಸ್ಯೆ ಬಗೆಹರಿಯದಿದ್ದರೆ KEB ಕಚೇರಿಗೆ ಮುತ್ತಿಗೆ ಹಾಕುವುದಾಗಿ ಕಿತ್ತೂರು ಕರ್ನಾಟಕ ಸೇನೆ ಎಚ್ಚರಿಕೆ ನೀಡಿದೆ.

ತೀರ್ಥಕುಂಡೆ ಗ್ರಾಮದ ಜಮೀನುಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ 24 ಗಂಟೆಗಳ ಕಾಲ ವಿದ್ಯುತ್ ಪೂರೈಸುವಂತೆ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ ನೀಡಬೇಕಾದ 7 ಗಂಟೆಗಳ ವಿದ್ಯುತ್ ಕಳೆದ 8 ದಿನಗಳಿಂದ ಬಾರದೆ ರೈತರ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಜಮೀನಿನಲ್ಲಿರುವ ಟಿಸಿ (ಟ್ರಿಪ್ಲರ್/ಟ್ರಾನ್ಸ್‌ಫಾರ್ಮರ್)ಗಳು ಕೆಟ್ಟುಹೋಗಿದ್ದರೂ ಪವರ್ ಮ್ಯಾನ್‌ಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಕಿತ್ತೂರು ಕರ್ನಾಟಕ ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ್ ಎಸ್. ಶೀಗಿಹಳ್ಳಿ ಅವರು ಖಾನಾಪುರ ತಾಲೂಕಿನ AEE ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬಾಳು ಮುತ್ಯನಟ್ಟಿ, ಮಹಾದೇವ ಕೊಡತಿ, ಸಿದ್ರಾಮ್ ಜಾಂಬೋಟಿ, ರಾಮಲಿಂಗ್ ಮೊರೆ, ಲಗಮೋಜಿ ಗವನ್ನವರ, ಮಲ್ಲಿಕಾರ್ಜುನ ಗುಣ್ಣಗೋಳ, ಉದಯ ಪಾಟೀಲ, ಪ್ರಕಾಶ್ ಮಜಗವಿ, ನಂದು ಹೊನಗೆಕರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

Tags:

error: Content is protected !!